ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್-ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಭಾರತ ಇಸ್ರೇಲ್‌ಗೆ ಬೆಂಬಲ ನೀಡಿದೆ, ಆದರೆ ಯುದ್ಧದಲ್ಲಿ ಗಾಜಾಪಟ್ಟಿಯಲ್ಲಿ ನಾಗರಿಕರ ಪ್ರಾಣಹಾನಿಯಾಗುತ್ತಿದೆ. ಇದನ್ನು ಬಲವಾಗಿ ಖಂಡಿಸುತ್ತೇವೆ. ಎರಡು ರಾಷ್ಟ್ರಗಳ ಯುದ್ಧದಲ್ಲಿ ಅಮಾಯಕರ ಪ್ರಾಣ ಬಲಿಯಾಗುವುದನ್ನು ಒಪ್ಪುವುದಿಲ್ಲ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ.
ಭಾರತದ ಖಾಯಂ ಪ್ರತಿನಿಧಿ ರುಚಿಕಾ ಕಾಂಬೋಜ್ ಈ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದಾರೆ. ಹಮಾಸ್ ಹಾಗೂ ಇಸ್ರೇಲ್ ನಡುವಣ ಸಂಘರ್ಷದಿಂದ ಅದೆಷ್ಟು ಅಮಾಯಕರ ಪ್ರಾಣ ಹೋಗಿದೆ. ಮಹಿಳೆಯರು, ಮತ್ತು ಮಕ್ಕಳ ಸಾವಿನ ಸಂಖ್ಯೆ ಎಷ್ಟಿದೆ ಗೊತ್ತಾ? ಇದು ಆತಂಕಕಾರಿ, ಮಾನವೀಯ ಬಿಕ್ಕಟ್ಟಿಗೆ ಇದು ಕಾರಣವಾಗಲಿದೆ ಎಂದಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ತಿಳಿಗೊಳಿಸಲು ಮತ್ತು ಗಾಜಾದಲ್ಲಿ ಮಾನವೀಯ ನೆರವನ್ನು ವಿಸ್ತರಿಸಲು ಭಾರತ ನಿರಂತರ ಪ್ರಯತ್ನದಲ್ಲಿದೆ ಎಂದು ಹೇಳಿದ್ದಾರೆ.