ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ನೇ ಸಾಲಿನಲ್ಲಿ ಅಂಗಾಂಗ ದಾನ ಕಾರ್ಯದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದುಕೊಂಡಿದೆ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ
ಇದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ.ಅಂಗಾಂಗ ದಾನ ಕಾರ್ಯದಲ್ಲಿ ಕರ್ನಾಟಕ 2025ನೇ ಸಾಲಿನಲ್ಲಿ ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ಕಳೆದ ವರ್ಷ 198 ದಾನಿಗಳಿಂದ 564 ಅಂಗಾಂಗಗಳ ಕಸಿ ಮಾಡುವ ಮೂಲಕ ನೂರಾರು ಜೀವಗಳಿಗೆ ಮರುಜನ್ಮ ಸಿಕ್ಕಿದಂತಾಗಿದೆ.
ಒಟ್ಟು ದಾನಿಗಳು: 198
ಕಿಡ್ನಿ: 306
ಲಿವರ್: 167
ಹೃದಯ: 50
ಶ್ವಾಸಕೋಶ: 29
ಕಣ್ಣು (Cornea): 288
ರಾಜ್ಯದಲ್ಲಿ 2016 ರಿಂದ ಈವರೆಗೂ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅಂಗಾಂಗ ದಾನವು ಕೇವಲ ಒಂದು ಕೊಡುಗೆಯಲ್ಲ, ಅದು ಮತ್ತೊಬ್ಬರಿಗೆ ನೀಡುವ ಜೀವದಾನ. ಹಾಗಾಗಿ ಇಡೀ ರಾಜ್ಯದ ಜನತೆಯಲ್ಲಿ ವಿನಂತಿಸುವೆ, ‘ಜೀವಸಾರ್ಥಕತೆ’ ಕಾರ್ಯಕ್ರಮದೊಂದಿಗೆ ಕೈಜೋಡಿಸೋಣ ಅಂಗಾಂಗ ದಾನ ಮಾಡುವ ಮೂಲಕ ಸಾವಿನ ನಂತರವೂ ಜೀವಂತವಿರೋಣ ಹಾಗೂ ಜೀವ ಉಳಿಸೋಣ ಎಂದು ಬರೆದುಕೊಂಡಿದ್ದಾರೆ.

