ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಹೆಸರನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡಲು ಕೇಂದ್ರ ಮೋದಿ ಸರಕಾರ ಅನೊಮೋದನೆ ನೀಡಿದ್ದು, ಆದರೆ ಈ ನಿರ್ಧಾರವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ವಿರೋಧಿಸಿದ್ದಾರೆ.
ಕೇರಳಂ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಡೀ ಕೇರಳ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ,ಕೇರಳದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡುವ ಬದಲು, ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಯೋಜನೆಗಳನ್ನು ಘೋಷಿಸಿದ್ದರೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.
ಇಂಗ್ಲಿಷ್ ಮಾತನಾಡುವವರು ಈಗ ರಾಜ್ಯದ ನಿವಾಸಿಗಳನ್ನು ಏನೆಂದು ಕರೆಯುತ್ತಾರೆ ‘ಕೇರಲೈಟ್’ ಮತ್ತು ‘ಕೇರಳನ್’ ಪದಗಳಿಗೆ ಈಗ ಏನಾಗುತ್ತದೆ? ‘ಕೇರಳಮೈಟ್’ ಎಂದು ಕರೆಯಲಾಗುತ್ತದೆಯೇ? ‘ಕೇರಳಮೈಟ್’ ಒಂದು ಸೂಕ್ಷ್ಮಜೀವಿಯಂತೆ ಧ್ವನಿಸುತ್ತದೆ.‘ಕೇರಳಮೈನ್’ ಪದವು ಅಪರೂಪದ ಭೂಮಿಯ ಖನಿಜದಂತೆ ಧ್ವನಿಸುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ನಮಗೆ ಏಮ್ಸ್ ಸೇರಿದಂತೆ ಯಾವುದೇ ಹೊಸ ಸಂಸ್ಥೆಗಳನ್ನು ನೀಡಿಲ್ಲ. ಅವರು ನಮಗೆ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ. ಆದರೆ ರಾಜ್ಯದ ಹೆಸರು ಬದಲಾವಣೆಯನ್ನೇ ಬಹುದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಶಶಿ ತರೂರ್ ಅಸಮಾಧಾನ ಹೊರಹಾಕಿದ್ದಾರೆ.
ಕೇರಳದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಲು 2024ರ ಜೂನ್ 24ರಂದು ಕೇರಳ ಸರ್ಕಾರವು ಸಲ್ಲಿಸಿದ್ದ ಪ್ರಸ್ತಾಪವನ್ನು ಬರೋಬ್ಬರಿ 2 ವರ್ಷಗಳ ನಂತರ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ.



