ಗೋದ್ರಾ ರೀತಿ ಘಟನೆ ಮರುಕಳಿಸುತ್ತಿದೆ ಅಂತಾದ್ರೆ ರಾಜ್ಯದ ಸಿಎಂ ಏನ್ ಮಾಡ್ತಿದ್ದಾರೆ? : ಅರವಿಂದ ಬೆಲ್ಲದ

ಹೊಸದಿಗಂತ ವರದಿ ಹುಬ್ಬಳ್ಳಿ:

ಗೋದ್ರಾ ರೀತಿ ಘಟನೆ ರಾಜ್ಯದಲ್ಲಿಯೂ ನಡೆಯುತ್ತಿದೆ ಎಂದು ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಗೋದ್ರಾ ಘಟನೆ ಮರುಕಳಿಸುತ್ತಿದೆ ಎಂದಾದ್ರೆ ರಾಜ್ಯದ ಸಿಎಂ ಏನ್ ಮಾಡ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.

‘ಗೋದ್ರಾದಲ್ಲಿ ಆದ ಘಟನೆಯನ್ನು ಇಲ್ಲಿಯೂ ಸೃಷ್ಟಿಸುತ್ತಿದ್ದಾರೆ’ ಎಂದು ಓಪನ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಅವರು ಹೇಳುವ ಹಾಗೆ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿದ್ದರೆ ಸಿಎಂ ಸಿದ್ದರಾಮಯ್ಯ ಏನು ಮಾಡ್ತಿದ್ದಾರೆ? ರಾಜ್ಯದ ಜನರ ರಕ್ಷಣೆ ಮಾಡೋದು ಅವರ ಕರ್ತವ್ಯ ಅಲ್ವಾ? ಎಂದರು.

ಗೋದ್ರಾದಲ್ಲಿ ಕರಸೇವಕರನ್ನು ಸುಟ್ಟವರು ಯಾರು? ಮುಸ್ಲಿಂ ಸಮುದಾಯ ತಾನೇ, ಅದೇ ರೀತಿ ಮತ್ತೆ ಆಗುತ್ತಿದೆ ಎಂದು ಹೇಳೋದಾದ್ರೆ ಸರ್ಕಾರ ಯಾಕೆ ಸುಮ್ಮನಿದೆ? ಹಿಂದೂಗಳಿಗೆ ಯಾಕೆ ರಕ್ಷಣೆ ಸಿಗ್ತಿಲ್ಲ? ರಾಜ್ಯದ ಹಿಂದೂಗಳು ಕೂಡ ಸರ್ಕಾರದ್ದೇ ಜವಾಬ್ದಾರಿ, ಈ ರೀತಿ ಹೇಳಿಕೆಗಳಿಂದ ಹಿಂದೂಗಳನ್ನು ಭಯಬೀಳಿಸುವ ಸ್ಟಾಟರ್ಜಿ ನಡೆದಿದೆಯಾ? ಇದೊಂದು ಜವಾಬ್ದಾರಿ ಇಲ್ಲದ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here