ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್‍ಗಳ ವಿರುದ್ಧ ನಟಿ ರಮ್ಯಾ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.
ದೂರು ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಸ್ವಾಮಿ ಹತ್ಯೆ ಕೇಸ್ ವಿಚಾರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾ ಸಿಗುತ್ತೆ ಎಂದು ಸ್ಟೇಟಸ್ ಹಾಕಿದ್ದೆ. ಇದಕ್ಕೆ ನನಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದರು. ಇವರಿಗೂ ರೇಣುಕಾಸ್ವಾಮಿಗೂ ಎನು ವ್ಯತ್ಯಾಸ? ಹಾಗಾಗಿ ನಾನು ದೂರು ಕೊಟ್ಟಿದ್ದೇನೆ. ದೂರನ್ನು ಕಮಿಷನರ್ ಸ್ವೀಕರಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲಾ ಹೆಣ್ಮಕ್ಕಳ ಪರವಾಗಿ ದೂರು ನೀಡಿದ್ದೇನೆ. ಇದರಿಂದ ಸಮಾಜಕ್ಕೆ ಸಂದೇಶ ಹೋಗಬೇಕು. ಚಿತ್ರರಂಗದಿಂದ ಹೆಣ್ಣುಮಕ್ಕಳಿಂದ ಸಂಪೂರ್ಣ ಬೆಂಬಲ ಇದೆ. ನಾನು 2 ವರ್ಷದ ಹಿಂದೆಯೂ ಪೋಸ್ಟ್ ಮಾಡಿದ್ದೆ. ಯಶ್, ಸುದೀಪ್ ಮನೆಯವರ ಬೆಗ್ಗಯೂ ಕೆಟ್ಟದಾಗಿ ಮೆಸೇಜ್ ಮಾಡಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.