ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹನಿಟ್ರ್ಯಾಪ್ ವಿಷಯ ಮುನ್ನೆಲೆಗೆ ಬಂದಿದೆ. ರಾಜಕಾರಣಿಗಳು ಹನಿಟ್ರ್ಯಾಪ್‌ಗೆ ಬಲಿಯಾಗ್ತಿದ್ದಾರೆ. ಹನಿಟ್ರ್ಯಾಪ್ ಅಂದ್ರೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ..
ಸುಂದರ ಯುವತಿಯರನ್ನು ಕ್ಯಾಮರಾ ಮುಂದೆ ಇಟ್ಟುಕೊಂಡು ಹಣವಂತರನ್ನು ಖೆಡ್ಡಾಗೆ ಕೆಡವೋದೇ ಹನಿಟ್ರ್ಯಾಪ್. ಮಹಿಳೆಯರನ್ನು ಬಳಸಿಕೊಂಡು ಲೈಂಗಿಕ ಆಸೆ ತೋರಿಸಿ ಅವರಿಂದ ಹಣ, ಇಂಪಾರ್ಟೆಂಟ್ ವಿಷಯಗಳನ್ನು ತಿಳಿದುಕೊಳ್ತಾರೆ. ಈ ಆಮಿಷಕ್ಕೆ ಬಲಿಯಾಗುವವರಿಗೆ ಗೊತ್ತಿಲ್ಲದಂತೆ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡೋದು, ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಳ್ಳೋದು, ಹಿಡನ್ ಕ್ಯಾಮರಾ ಇಡುತ್ತಾರೆ. ನಂತರ ಬ್ಲಾಕ್ ಮೇಲ್ ಮಾಡಿ ಹಣ ಪೀಕುತ್ತಾರೆ.
ಮೊದಮೊದಲು ಹಣಕ್ಕಿಂತ ಮರ್ಯಾದಿ ಮುಖ್ಯ ಎಂದು ಜನ ಕೇಳಿದಷ್ಟು ಹಣ ನೀಡುತ್ತಾರೆ. ನಂತರ ಇನ್ನಷ್ಟು ಹಣ ಕೇಳುತ್ತಲೇ ಇದ್ದಾಗ ಬೇಸತ್ತು ಪೊಲೀಸರ ಮೊರೆ ಹೋಗುತ್ತಾರೆ. ಬ್ಯುಸ್‌ನೆಸ್‌ಮೆನ್‌ಗಳು, ಶ್ರೀಮಂತರು, ರಾಜಕಾರಣಿಗಳು ಇವರ ಟಾರ್ಗೆಟ್. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳೆಸಿ ಕ್ಲೋಸ್ ಆಗಿ ಮಾತನಾಡುತ್ತಾರೆ. ಫ್ಲರ್ಟ್ ಮಾಡಿ ಸಂಬಂಧ ಬೆಳೆಸುತ್ತಾರೆ. ನಂತರ ರೂಮಿಗೆ ಕರೆಸುತ್ತಾರೆ. ಆಗ ರೆಕಾರ್ಡ್ ಮಾಡಿ ನಂತರ ಬ್ಲಾಕ್ ಮೇಲ್ ಮಾಡುತ್ತಾರೆ.
ಮೆಸೇಜ್, ಕಾಲ್ ಮಾಡಿ ಕ್ಲೋಸ್ ಆದ ನಂತರ ವಿಡಿಯೋ ಕಾಲ್ ಮಾಡುತ್ತಾರೆ. ಬರೀ ಬೆತ್ತಲೆ ವಿಡಿಯೋ ಕಾಲ್ ಮಾಡಿ ಫೋನ್ ಸೆಕ್ಸ್‌ಗೆ ಆಹ್ವಾನಿಸುತ್ತಾರೆ. ಪ್ರತಿ ಕ್ಷಣವನ್ನು ರೆಕಾರ್ಡ್ ಮಾಡುತ್ತಾರೆ.
ಕೆಲವೊಮ್ಮೆ ಹೋಟೆಲ್‌ಗಳಿಗೂ ಯುವಕರನ್ನು ಕರೆಸಿ, ಅಲ್ಲಿಗೆ ಬಂದ ಯುವಕ ರೋಮ್ಯಾನ್ಸ್ ಆರಂಭಿಸುವ ಮೊದಲೇ ಯುವತಿಯ ಜೊತೆಗಾರರು ನುಗ್ಗಿ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಸನ್ನಿವೇಶಗಳೂ ಇವೆ.
ಇತ್ತೀಚೆಗೆ ರಾಜ್ಯದ ರಾಜಕೀಯದಲ್ಲೂ ಹನಿಟ್ರ್ಯಾಪ್ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಶಾಸಕರು ತಮ್ಮ ಬಳಿ ಬೇರೆಯವರ ಅಶ್ಲೀಲ ಸಿಡಿಗಳಿವೆ ಎಂದು ಹೇಳುತ್ತಿದ್ದಾರೆ. ಈ ರೀತಿ ಶಾಸಕರು ಮತ್ತು ಸಚಿವರನ್ನೇ ಹನಿಟ್ರ್ಯಾಪ್ ಮಾಡುವುದರಿಂದ ಇಡೀ ಸರ್ಕಾರವನ್ನೇ ಬ್ಲ್ಯಾಕ್ ಮೇಲ್ ಮಾಡಿ, ಪರೋಕ್ಷವಾಗಿ ಆಡಳಿತ ನಡೆಸಬಹುದು. ಉದಾಹರಣೆಗೆ, ಒಬ್ಬ ಸಚಿವರನ್ನು ಹನಿಟ್ರ್ಯಾಪ್ ಮಾಡಿ ಅವರ ಮೇಲೆ ಒತ್ತಡ ಹೇರಿ ಒಂದು ನಿರ್ದಿಷ್ಟ ಕಂಪನಿಗೆ ಟೆಂಡರ್ ಕೊಡಿಸಬಹುದು ಅಥವಾ ಬೇರೆ ರೀತಿಯಲ್ಲಿ ಸರ್ಕಾರದ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು.
ಹನಿಟ್ರ್ಯಾಪ್‌ನಂತಹ ಗಂಭೀರ ಅಪರಾಧಗಳಿಗೆ ಸೂಕ್ತ ಕಾನೂನುಗಳ ಕೊರತೆ ಇದೆ. ಈ ರೀತಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹನಿಟ್ರ್ಯಾಪ್ ಅನ್ನು ವಿವರಿಸಲು ಸ್ಪಷ್ಟ ಕಾನೂನು ಇಲ್ಲ. ಪೊಲೀಸರು ಹಾಕುವ ಸುಲಿಗೆ, ವಂಚನೆ ಸೆಕ್ಷನ್‌ಗಳಲ್ಲಿ ಜಾಮೀನು ಸಿಗುವುದು ಸುಲಭ. ಬೆದರಿಕೆ ಹಾಕಿ ಸುಲಿಗೆ ಮಾಡಿದರೆ ಕೇವಲ 2 ವರ್ಷ, ವಂಚನೆಗೆ 1 ವರ್ಷ ಶಿಕ್ಷೆ. ಎರಡೂ ಸುಲಭ ಜಾಮೀನು ಸಿಗುವ ಅಪರಾಧಗಳು.