ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವರಮಹಾಲಕ್ಷ್ಮೀ ಹಬ್ಬ. ಈ ಹಬ್ಬದಂದು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಚಿನ್ನಾಭರಣಗಳಿಂದ ಪೂಜಿಸಿ, ಮನೆಯಲ್ಲಿ ನೆಲೆಸುವಂತೆ ಪ್ರಾರ್ಥನೆ ಮಾಡಿಕೊಳ್ಳಲಾಗುತ್ತದೆ. ಈ ಹಬ್ಬದಂದು ಚಿನ್ನ ಖರೀದಿ ಒಳ್ಳೆಯದು ಎಂದು ಹೇಳುತ್ತಾರೆ. ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
ಇಂದು ಶುಕ್ರವಾರ ಹಳದಿ ಲೋಹದ ಬೆಲೆ ಗ್ರಾಮ್ಗೆ 70 ರೂ ಹೆಚ್ಚಾಗಿದೆ. ಆಭರಣ ಚಿನ್ನದ ಬೆಲೆ 9,500 ರೂ ಸಮೀಪಕ್ಕೆ ದೌಡಾಯಿಸುತ್ತಿದೆ. ಅಪರಂಜಿ ಚಿನ್ನದ ಬೆಲೆ 10,300 ರೂ ಗಡಿ ದಾಟಿ ಮುಂದೆ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 7,750 ರೂ ಗಡಿಗೆ ಬಂದಿದೆ.
ವಿದೇಶಗಳಲ್ಲೂ ಇವತ್ತು ಬೆಲೆ ಹೆಚ್ಚಳ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಏರಿಕೆ ಕಂಡು ಬಂದಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 94,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,03,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 94,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,700 ರುಪಾಯಿಯಲ್ಲಿ ಇದೆ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 94,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,03,310 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ.