ನೇರಳೆ ಹಣ್ಣಿನ ಸೀಸನ್ ಬಂದಿದ್ದು, ಮನಬಂದಷ್ಟು ಹಣ್ಣುಗಳನ್ನು ತಿಂದುಬಿಡಿ. ಆದರೆ ಸರಿಯಾಗಿ ತೊಳೆದು ಅದರ ಒಗರು ರುಚಿಯನ್ನು ಹೋಗಿಸಿ, ಹಾಗೇ ತಿಂದರೆ ಒಣಕೆಮ್ಮು ಬರುವ ಸಾಧ್ಯತೆ ಇದೆ. ಹೇಗೆ ತೊಳೆಯೋದು ಗೊತ್ತಾ?
ಮೊದಲು ಹಣ್ಣಿಗೆ ಉಪ್ಪು ಹಾಕಿ ಚೆನ್ನಾಗಿ ಕೈ ಆಡಿಸಿ, ನಂತರ ನೀರಿನಲ್ಲಿ ಸಂಪೂರ್ಣವಾಗಿ ತೊಳೆಯಿರಿ. ನಂತರ ಮತ್ತೆ ಕಲ್ಲುಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಕಲ್ಲುಪ್ಪಿನ ಚೂಪಿಗೆ ಅದು ನೇರಳೆ ಹಣ್ಣನ್ನು ಕತ್ತರಿಸುತ್ತದೆ. ಉಪ್ಪು ಒಳಗೆ ಹೋದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
ಏನಿದೆ ಲಾಭ?
ನೇರಳೆ ಹೆಚ್ಚಿನ ಮಟ್ಟದ ಪೊಟ್ಯಾಸಿಯಮ್ ಅಂಶವನ್ನು ಹೊಂದಿದ್ದು ಇದು ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣಿನಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್‌ಗಳು ಇದ್ದು ಅದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣು ತಿನ್ನುವುದು ಚರ್ಮ ಆರೋಗ್ಯಕ್ಕೂ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ನೀವು ಆಗಾಗ್ಗೆ ತಲೆನೋವಿನಿಂದ ಬಳಲುತ್ತಿದ್ದರೆ ನೇರಳೆ ಸೇವನೆಯು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ.
ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಇದೆ, ಇದು ಕೆಮ್ಮು ಮತ್ತು ಇತರ ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡುತ್ತದೆ.