ತೆಳ್ಳನೆಯ ದೇಹ ಬಹುತೆಕರ ಕನಸು,ತೂಕ ಇಳಿಸುವಿಕೆ ಒಂದು ದಿನದ ಕೆಲಸ ಅಲ್ಲ, ತೂಕ ಇಳಿಸಲು ಮನಸ್ಸು ಮಾಡುವುದು ಮುಖ್ಯ. ಬೆಳಗ್ಗೆ ಎದ್ದು ಜಿಮ್ ಹೋಗಬೇಕು ಎಂದುಕೊಳ್ಳುತ್ತೀರಿ. ಆದರೆ ಬೆಳಗ್ಗೆ ಏಳುವುದೇ ಕಷ್ಟ. ಟ್ರಿಪ್ ಹೋಗಲು ಬೆಳಗ್ಗೆ ಬೇಗ ಏಳಬಹುದು ಆದರೆ ಜಿಮ್‌ಗೆ ಆಗೋದಿಲ್ಲ. ಮನಸ್ಸು ಮಾಡಿದರೆ ಮಾತ್ರ ಸಣ್ಣ ಆಗಲು ಸಾಧ್ಯ, ಈ ಟಿಪ್ಸ್‌ಗಳು ನಿಮ್ಮ ತೂಕ ಇಳಿಕೆ ಪ್ರಯಾಣಕ್ಕೆ ಸಹಾಯವಾಗಬಹುದು..
- ಬೆಳಗಿನ ಉಪಹಾರ ಮಿಸ್ ಮಾಡಬೇಡಿ
- ಸರಿಯಾದ ಸಮಯಕ್ಕೆ ತಿನ್ನಿ
- ನೀವು ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾಡುತ್ತಾ ಬನ್ನಿ
- ವ್ಯಾಯಾಮ ಬೇಕೇಬೇಕು
- ಹೆಚ್ಚು ನೀರು ಕುಡಿಯಿರಿ
- ಹೈ ಫೈಬರ್ ಇರುವ ಆಹಾರ ಸೇವಿಸಿ
- ಆಹಾರ ಸೇವನೆಗೂ ಮುನ್ನ ಲೇಬಲ್ ಓದಿ
- ಸಣ್ಣ ತಟ್ಟೆಯಲ್ಲಿ ಊಟ ಮಾಡಿ
- ಜಾಸ್ತಿ ಓಡಾಟ ಇರಲಿ
- ಹಣ್ಣು ತರಕಾರಿ ಹೆಚ್ಚು ತಿನ್ನಿ
- ಕ್ರಾಶ್ ಡಯಟ್ ಬದಲು, ಸರಿಯಾದ ಕ್ರಮದಲ್ಲಿ ತೂಕ ಇಳಿಸಿ
- ಜಂಕ್ ಹಾಗೂ ಮೈದಾದಿಂದ ದೂರ ಇರಿ
- ಸಕ್ಕರೆ ಪಾನೀಯಗಳು ಬೇಡ
- ಗಬಗಬನೆ ತಿನ್ನಬೇಡಿ, ನಿಧಾನಕ್ಕೆ ಜಗಿದು ಆಹಾರ ಸೇವಿಸಿ
- ಗ್ರೀನ್ ಟೀ, ಆಪಲ್ ಸೈಡರ್ ವಿನೇಗರ್ ಸೇವಿಸಿ
- ನಿದ್ದೆ ಸರಿಯಾಗಿ ಮಾಡಿ
- ಒತ್ತಡದಿಂದ ದೂರ ಇರಿ