ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಪಂದ್ಯಗಳನ್ನು ಆಡ್ತಿರುವ ಕಾರಣ, ಟೀಂ ಇಂಡಿಯಾ ಆಯ್ಕೆಯಾಗುವ ಮುನ್ನವೇ ಕೊಹ್ಲಿ ಈ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದರು.
ಈಗ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡ್ತಿದ್ದಂತೆ ಬಿಸಿಸಿಐ ಅವರ ಸಂಬಳ ಕಟ್ ಮಾಡುತ್ತಾರೆ ಅನ್ನೋ ಪ್ರಶ್ನೆ ನಮ್ಮ ಮುಂದಿದೆ. ಅದಕ್ಕೆ ಉತ್ತರ ಹೇಳ್ತಿವಿ ಕೇಳಿ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ, ಹಾಗಾಗಿ ಅವರಿಗೆ ಟೆಸ್ಟ್ ಪಂದ್ಯ ಶುಲ್ಕ ಸಿಗುವುದಿಲ್ಲ. ಅಲ್ಲದೆ ಟಿ20 ಪಂದ್ಯ ಶುಲ್ಕ ಕೂಡ ಸಿಗೋದಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರ ಕೊಹ್ಲಿ ವಾರ್ಷಿಕ ಸಂಬಳದಲ್ಲಿ ಸದ್ಯ ಯಾವುದೇ ಬದಲಾವಣೆಯಾಗುವುದಿಲ್ಲ ಅನ್ನೋದು ಖಂಡಿತ.
ಯಾರಿಗೆ ಎಷ್ಟು ಸಂಬಳ?
ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.
ಎ+ ಗ್ರೇಡ್ ನಲ್ಲಿರುವ ಆಟಗಾರರಿಗೆ ವಾರ್ಷಿಕ 7 ಕೋಟಿ ರೂಪಾಯಿ
ಎ ಗ್ರೇಡ್ ಆಟಗಾರರಿಗೆ ಬಿಸಿಸಿಐ ವಾರ್ಷಿಕ 5 ಕೋಟಿ ರೂಪಾಯಿ
ಬಿ ಗ್ರೇಡ್ ಆಟಗಾರರಿಗೆ ವಾರ್ಷಿಕ 3 ಕೋಟಿ ರೂಪಾಯಿ
ಸಿ ಗ್ರೇಡ್ ಆಟಗಾರರು ವಾರ್ಷಿಕ 1 ಕೋಟಿ ರೂಪಾಯಿ ಪಡೆಯುತ್ತಾರೆ.
ವಿರಾಟ್ ಕೊಹ್ಲಿ ಪ್ರಸ್ತುತ ಬಿಸಿಸಿಐನ ಎ+ ಗ್ರೇಡ್ ಪಟ್ಟಿಯಲ್ಲಿದ್ದಾರೆ. ಅಂದ್ರೆ ಅವರಿಗೆ ಪ್ರತಿ ವರ್ಷ 7 ಕೋಟಿ ರೂಪಾಯಿ ವೇತನ ಸಿಗುತ್ತಿದೆ. ಇದಲ್ಲದೆ ಟೆಸ್ಟ್ ಪಂದ್ಯಗಳಿಗೆ 15 ಲಕ್ಷ ರೂಪಾಯಿ. ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ನೀಡಲಾಗುತ್ತದೆ.