ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ಐಪಿಎಲ್ 2023 ಫೈನಲ್ ಪಂದ್ಯ ನಡೆಯಬೇಕಿದ್ದು, ಮಳೆಯ ಅಡ್ಡಿಯಿಂದಾಗಿ ಪಂದ್ಯವನ್ನು ಇಂದಿಗೆ ಪೋಸ್ಟ್‌ಪೋನ್ ಮಾಡಲಾಗಿತ್ತು.
ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯಕ್ಕೆ ಸಾಕಷ್ಟು ಕ್ರೀಡಾಭಿಮಾನಿಗಳು ಆಗಮಿಸಿದ್ದರು. ಆದರೆ ಮಳೆ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾಗಿದ್ದು, ಇಂದಿಗೆ ಪಂದ್ಯವನ್ನು ಪೋಸ್ಟ್‌ಪೋನ್ ಮಾಡಲಾಗಿತ್ತು.
ನಿನ್ನೆ ಟಾಸ್‌ಗೂ ಮುನ್ನ ಮಳೆ ಸುರಿದಿದ್ದು, ಇಂದು ಪಂದ್ಯ ಆರಂಭವಾಗಲಿದೆ. ಇಂದು ಕೂಡ ಮಳೆ ಸುರಿದರೆ ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರವಿರುವ ತಂಡ ಚಾಂಪಿಯನ್ಸ್ ಎನಿಸಿಕೊಳ್ಳಲಿದ್ದಾರೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲಿದ್ದು, ಅವರೇ ಚಾಂಪಿಯನ್ಸ್ ಪಟ್ಟ ಅಲಂಕರಿಸಲಿದ್ದಾರೆ. ಗುಜರಾತ್ 14 ಪಂದ್ಯಗಳಿಂದ 20 ಅಂಕ ಪಡೆದಿದ್ದು, ಸಿಎಸ್‌ಕೆ 14 ಪಂದ್ಯದಿಂದ 17 ಅಂಕ ಪಡೆದಿದೆ. ಸಿಎಸ್‌ಕೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.