ರಾಹುಲ್​ ಗಾಂಧಿ ಪ್ರಧಾನಿ ಪಟ್ಟ ಏರಲು ಏನು ಮಾಡಬೇಕು?: ರಾಖಿ ಸಾವಂತ್ ಕೊಟ್ರು ನೋಡಿ​ ಟಿಪ್ಸ್!​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ರಾಖಿ ಸಾವಂತ್​ ಅಂದರೆ ಅಲ್ಲಿ ಒಂದಲ್ಲ ಒಂದು ಸುದ್ದಿ ಇದ್ದೆ ಇರುತ್ತೆ. ಸದಾ ಟ್ರೋಲ್​ ಆಗುತ್ತಲೇ ಖುಷಿ ಪಡುತ್ತಾರೆ.

ಇದೀಗ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್​ ಗಾಂಧಿಯವರು ಪ್ರಧಾನಿ ಪಟ್ಟ ಏರಲು ಏನು ಮಾಡಬೇಕು ಎಂದು ರಾಖಿ ಸಾವಂತ್​ ಟಿಪ್ಸ್​ ಕೊಟ್ಟಿದ್ದಾರೆ.

ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಹೇಗಾದರೂ ಮಾಡಿ ಬಿಜೆಪಿಯನ್ನು ಕೆಳಕ್ಕಿಳಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಕಾಂಗ್ರೆಸ್ಸಿಗರು ತಲೆ ಕೆಡಿಸಿಕೊಂಡಿರುವ ಸಮಯದಲ್ಲಿಯೇ ರಾಖಿ ಸಾವಂತ್​ ರಾಹುಲ್​ ಗಾಂಧಿಯವರು ಪ್ರಧಾನಿಯಾಗಲು ಏನು ಮಾಡಬೇಕು ಎಂದು ಸುಲಭದ ಟಿಪ್ಸ್​ ಕೊಟ್ಟಿದ್ದಾರೆ.

ರಾಹುಲ್​ ಗಾಂಧಿಯವರು ಬಿಗ್​ಬಾಸ್​ಗೆ (Bigg Boss) ಒಮ್ಮೆ ಹೋಗಬೇಕು ಎನ್ನುವುದು.
ರಾಖಿ ಸಾವಂತ್ ಕೂಡ ಲವೊಂದು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಖ್ಯಾತಿ ಕೊಟ್ಟಿದ್ದು ಬಿಗ್​ಬಾಸ್​. ಬಿಗ್​ಬಾಸ್​ ಮನೆಯಲ್ಲಿ ಹೋಗಿ ಹಂಗಾಮಾ ಸೃಷ್ಟಿಸಿ ವಾಪಸ್​ ಬಂದ ಮೇಲೆಯೇ ಇವರು ಸಕತ್​ ಸುದ್ದಿ ಮಾಡಿದ್ದು. ಇದೇ ಕಾರಣಕ್ಕೆ ರಾಹುಲ್​ ಗಾಂಧಿಯವರು ಬಿಗ್​ಬಾಸ್​ ಮನೆಯೊಳಕ್ಕೆ ಹೋದರೆ ಅವರ ಕೀರ್ತಿ ಹೆಚ್ಚುತ್ತದೆ. ಅವರು ಪ್ರಧಾನಿಯಾಗುತ್ತಾರೆ ಎಂದಿದ್ದಾರೆ ರಾಖಿ. ಬಿಗ್​ಬಾಸ್​ ಹಲವರಿಗೆ ಭವಿಷ್ಯ ನೀಡಿದೆ. ಅದೇ ರೀತಿ ರಾಹುಲ್​ ಗಾಂಧಿಯವರಿಗೂ ನೀಡುತ್ತದೆ ಎಂದಿದ್ದಾರೆ.

https://twitter.com/SachTakNo1/status/1678722965209481218?ref_src=twsrc%5Etfw%7Ctwcamp%5Etweetembed%7Ctwterm%5E1678722965209481218%7Ctwgr%5E20d258ce9227a54deeffab14e5314e0ec0bb7a96%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FSachTakNo1%2Fstatus%2F1678722965209481218%3Fref_src%3Dtwsrc5Etfw

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!