ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೇಮಾವತಿ ಎಕ್ಸ್ಪ್ರೆಸ್ ಲಿಂಕಿಂಗ್ ಕೆನಾಲ್ ವಿಚಾರವಾಗಿ ಕೆಎನ್ ರಾಜಣ್ಣ ಕುಟುಂಬ ಹಾಗೂ ಡಿಕೆಶಿ ಬೆಂಬಲಿಗರ ಮಧ್ಯೆ ಶೀತಲ ಸಮರ ಶುರುವಾಗಿದೆ. ಸಚಿವ ಕೆ.ಎನ್. ರಾಜಣ್ಣರ ಪುತ್ರ ರಾಜೇಂದ್ರ ರಾಜಣ್ಣ, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ಎಚ್.ಡಿ. ರಂಗನಾಥ್ ತಮಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕಳೆದ ಎರಡು ತಿಂಗಳಿಂದ ಕುಣಿಗಲ್ ಕ್ಷೇತ್ರದ ಜನರು ಲಿಂಕ್ ಕೆನಾಲ್ ವಿಷಯವಾಗಿ ತಮಗೆ ಫೋನ್ ಮಾಡುತ್ತಿದ್ದಾರೆ. ಡಾ. ರಂಗನಾಥ್ “ಲಿಂಕ್ ಕೆನಾಲ್ ಕಾಮಗಾರಿಯನ್ನು ನಾನು ಮತ್ತು ಸಚಿವರು ನಿಲ್ಲಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ” ಎಂದು ರಾಜೇಂದ್ರ ಆರೋಪಿಸಿದ್ದಾರೆ.
ನಾವು ಲಿಂಕ್ ಕೆನಾಲ್ ತಡೆದಿದ್ದೇವೆಯೇ? ಟೆಂಡರ್ ಆಗಿದೆ, ಕಾಮಗಾರಿ ನಡೆಯುತ್ತಿದೆ. ಆದರೆ ಈ ಯೋಜನೆಯಿಂದ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಿಗೆ ತೊಂದರೆಯಾಗುತ್ತದೆ. ನಮ್ಮ ಕುಡಿಯುವ ನೀರನ್ನು ದಾರಿ ಮಧ್ಯದಲ್ಲಿ ಕಸಿದುಕೊಂಡರೆ ನಮ್ಮ ಪರಿಸ್ಥಿತಿ ಏನಾಗಬೇಕು?” ಎಂದು ರಾಜೇಂದ್ರ ರಾಜಣ್ಣ ಪ್ರಶ್ನಿಸಿದ್ದಾರೆ.