ಮಳೆ ಬಂದ್ರೆ ಚಹಾ, ಬೋಂಡಾ, ಜೊತೆಗೆ ಮನೆಯ ಬಾಗಿಲಲ್ಲಿ ಕೂತು ಹಾಡು ಕೇಳೋದು ಎಷ್ಟು ಚೆನ್ನ! ಆದರೆ, ಅಷ್ಟೇ ಸುಂದರವಾದ ಈ ಮಳೆ ಕೆಲವೊಮ್ಮೆ ನಮಗೆ ಸಮಸ್ಯೆ ಕೊಡುವುದು ಉಂಟು? ಅಚಾನಕ ಮಳೆಯಿಂದಾಗಿ ಫೋನ್ ಒದ್ದೆಯಾದರೆ, ಎಂಥಾ ಪಾನಿಕ್ ಆಗುತ್ತೆ ಅಲ್ವಾ? “ಫೋನ್ ಮಸುಕಾಗಿ ಬಿಡ್ತು?”, “ಆನ್ ಮಾಡ್ಬೇಕಾ?”, “ಡ್ರೈಯರ್ ಹಾಕ್ಬೇಕಾ?” ಅಂತೆಲ್ಲ ಪ್ರಶ್ನೆಗಳು ತಲೆಗೆ ಬರುತ್ತೆ. ಇಂಥಾ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳದಿದ್ರೆ, ಫೋನ್ ಹಾಳಾಗೋದು ಪಕ್ಕ.
ಮಳೆಗಾಲದಲ್ಲಿ ಫೋನ್ ಒದ್ದೆಯಾದ್ರೆ ಮೊದಲಿಗೆ ಏನು ಮಾಡಬೇಕು?
ಮೊದಲನೆಯದಾಗಿ ಫೋನ್ ಆನ್ ಆಗಿರುವುದಾದರೆ ತಕ್ಷಣ ಶಟ್‌ಡೌನ್ ಮಾಡಿ. ನೀರಿನ ಸಂಪರ್ಕದಲ್ಲಿರುವ ಸಮಯದಲ್ಲಿ ಫೋನ್ ಕಾರ್ಯನಿರ್ವಹಿಸುತ್ತಿದ್ದರೆ ಆಂತರಿಕ ಭಾಗಗಳಿಗೆ ಗಂಭೀರ ಹಾನಿ ಸಂಭವಿಸಬಹುದು.
ಸಿಮ್, ಮೆಮೊರಿ ಕಾರ್ಡ್ ಮತ್ತು ಬ್ಯಾಟರಿ ತೆಗೆದುಹಾಕಿ
ಆಯಾ ಭಾಗಗಳನ್ನು ಎಚ್ಚರಿಕೆಯಿಂದ ತೆಗೆದು, ಮೃದುವಾದ ಒಣ ಬಟ್ಟೆಯಿಂದ ಫೋನ್‌ನ ಮೆಲ್ಮೈ ಒರೆಸಿ. ಚಾರ್ಜಿಂಗ್ ಪೋರ್ಟ್, ಇಯರ್‌ಫೋನ್ ಜ್ಯಾಕ್ ಗಳನ್ನು ಸೌಮ್ಯವಾಗಿ ಒರೆಸಿ.
ಅಕ್ಕಿಯಲ್ಲಿ ಅಥವಾ ಸಿಲಿಕಾ ಜೆಲ್‌ನಲ್ಲಿ ಒಣಗಿಸಿ
ಫೋನ್‌ನ ತೇವಾಂಶವನ್ನು ಹೋಗಲು 24-48 ಗಂಟೆಗಳ ಕಾಲ ಅದನ್ನು ಅಕ್ಕಿ ಅಥವಾ ಸಿಲಿಕಾ ಜೆಲ್ ಪ್ಯಾಕೆಟ್‌ಗಳಲ್ಲಿ ಇರಿಸಿ. ಇದು ಒಣಗಿಸಲು ಅತ್ಯುತ್ತಮ ನೈಸರ್ಗಿಕ ವಿಧಾನವಾಗಿದೆ.
ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ
ಒದ್ದೆಯಾದ ಫೋನ್ ಆನ್ ಮಾಡಲು ಯತ್ನಿಸಬೇಡಿ
ಚಾರ್ಜರ್ ಸಂಪರ್ಕಿಸಬೇಡಿ
ಹೇರ್ ಡ್ರೈಯರ್‌ನ ಬಿಸಿ ಗಾಳಿಯನ್ನು ಬಳಸಬೇಡಿ
ನೇರ ಸೂರ್ಯನ ಬೆಳಕಿಗೆ ಇಡಬೇಡಿ
ಫೋನ್‌ನ ಒಳಭಾಗಗಳನ್ನು ಸ್ವತಃ ತೆಗೆಯಬೇಡಿ
ಇವುಗಳಿಂದ ನಿಮ್ಮ ಫೋನ್‌ಗೆ ಹೆಚ್ಚು ಹಾನಿಯಾಗಬಹುದು.
ಮುನ್ನೆಚ್ಚರಿಕೆ ಕ್ರಮಗಳು
ವಾಟರ್‌ಪ್ರೂಫ್ ಕವರ್ ಬಳಸುವುದು
IP67/IP68 ರೇಟಿಂಗ್ ಇರುವ ಫೋನ್ ಬಳಸುವುದು
ಮಳೆ ದಿನಗಳಲ್ಲಿ ಫೋನ್‌ನ್ನು ವಾಟರ್‌ಪ್ರೂಫ್ ಬ್ಯಾಗ್‌ನಲ್ಲಿ ಇರಿಸುವುದು
ವಾಟರ್‌ಪ್ರೂಫ್ ಫೋನ್ ಕೂಡ ನೀರಿನಲ್ಲಿ ಹೆಚ್ಚು ಕಾಲ ಉಳಿದರೆ ಹಾನಿಯಾಗಬಹುದು. ಅಕ್ಕಿಯಲ್ಲಿ ಒಣಗಿಸಿದರೂ ಕೆಲಸ ಮಾಡದಿದ್ದರೆ ತಕ್ಷಣ ಅಧಿಕೃತ ಸರ್ವೀಸ್ ಸೆಂಟರ್‌ಗೆ ಸಂಪರ್ಕಿಸಿ.