ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 124 ವರ್ಷದ ಅಜ್ಜಿ ಚೀನಾದಲ್ಲಿ ಇದ್ದಾರೆ. ಇಷ್ಟು ವಯಸ್ಸಾಗಿದ್ದರೂ ಅಜ್ಜಿ ಹಾಸಿಗೆ ಹಿಡಿದಿಲ್ಲ. ಬದಲಾಗಿ ತಮ್ಮ ಕೆಲಸ ತಾವು ಮಾಡಿಕೊಂಡು, ತಮ್ಮ ಕೈಲಾದ ಸಹಾಯ ಮಾಡಿಕೊಂಡು ಆರೋಗ್ಯವಾಗಿ ನೆಮ್ಮದಿಯಾಗಿ ಇದ್ದಾರೆ.
ಕ್ಯೂ ಚೈಶಿ ಇವರ ಹೆಸರು. ಈ ಮಹಿಳೆ ಜನಿಸಿದ್ದು ಕ್ವಿಂಗ್ ಸಾಮ್ರಾಜ್ಯದ ಕಾಲದಲ್ಲಿ ಅಂದ್ರೆ 1901ರಲ್ಲಿ. ಕ್ವಿಂಗ್ ಸಾಮ್ರಾಜ್ಯ 1644 ರಿಂದ 1911ರವರೆಗೆ ಆಳಿತ್ತು. ಅಂದ್ರೆ ಅರೆ ವಸಾಹತುಶಾಹಿ ಕಾಲದಿಂದ ಅರೆ ಊಳಿಗಮಾನ್ಯ ಪದ್ಧತಿ ಆಳ್ವಿಕೆ ಕಾಲದವರೆಗಿನ ಬದುಕನ್ನು ಈ ಜೀವ ನೋಡಿದೆ. ಇದೇ ಜನವರಿ 1 ರಂದು ಈ ಮಹಿಳೆ ತನ್ನ 124ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡರು. ಇವರ ಕುಟುಂಬದ ಒಂದು 6 ತಲೆಮಾರುಗಳನ್ನು ಈ ವೃದ್ಧೆ ನೋಡಿದ್ದಾರೆ. ಇವರಿಗೆ 60 ವರ್ಷದ ಮೊಮ್ಮಗಳು ಇದ್ದಾರೆ ಹಾಗೂ 8 ತಿಂಗಳ ಅತ್ಯಂತ ಕಿರಿಯ ಮನೆಯ ಸದಸ್ಯರನ್ನು ಇವರು ಕಂಡಿದ್ದಾರೆ.
ದೀರ್ಘಾಯುಷಿಗಳಾಗೋಕೆ ಟಿಪ್ಸ್ ಏನು?
ಸರಳ ಹಾಗೂ ಶಿಸ್ತಿನ ಜೀವನಕ್ರಮ ನಮ್ಮದಾಗಿಸಿಕೊಳ್ಳಬೇಕು
ನಿತ್ಯ ಮೂರು ಹೊತ್ತು ಊಟ . ಪ್ರತಿ ಊಟದ ಬಳಿಕವೂ ಒಂದು ವಾಕ್ ಕಡ್ಡಾಯ
ರಾತ್ರಿ ಸರಿಯಾಗಿ 8 ಗಂಟೆಗೆ ನಿದ್ರೆ, ಆದಷ್ಟು ಕೆಲಸಕ್ಕೆ ಯಾರ ಮೇಲೆ ಡಿಪೆಂಡ್ ಆಗದೇ ಇರುವುದು
ಕುಂಬಳಕಾಯಿಂದ ಮಾಡಿದ ಗಂಜಿ, ಕಲ್ಲಂಗಡಿ, ಪುಡಿಮಾಡಿದ ಕಾರ್ನ್ನ ಬೇಯಿಸಿದ ಸಿಂಪಲ್ ಊಟ ತಿಂಡಿ
ಆರೋಗ್ಯ ಚೆನ್ನಾಗಿದೆ ಎನಿಸಿದರೂ ಆಗಾಗ ವೈದ್ಯರನ್ನು ಭೇಟಿ ಮಾಡಿ ಎಂದು ಅಜ್ಜಿ ಸಲಹೆ ನೀಡಿದ್ದಾರೆ.