ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ, ಡಿಸಿಎಂ ಯಾರಿಗೆ ಮುಳುವಾಗುತ್ತಾರೋ ನೋಡೋಣ. ಯಾರೋ ಅಯೋಗ್ಯ ಅಧಿಕಾರಿಗಳು ಮಾಡಿರುವ ಕೆಲಸ. ನಮಗೆ ಅದರಿಂದ ಏನು 10 ರೂಪಾಯಿ ಸಿಗಲಿಲ್ಲ. ಮಾಡಬಾರದ್ದನ್ನು ನಾವೇನು ಮಾಡಿದೆವು? ನಾವು ವಂಚನೆಯಲ್ಲಿ ಭಾಗಿಯಾಗಿದ್ದೇವೆಯೇ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಇಂದು ಕೂಡ ಪ್ರತಿಭಟನೆ ಮುಂದುವರಿಸಲಿದ್ದಾರೆ. ಅವರು ಏನು ಬೇಕಾದರೂ ಮಾಡಲಿ. ಏನು ಬೇಕಾದರೂ ರಾಜಕೀಯ ಮಾಡಲಿ, ಸಂವಿಧಾನವನ್ನು ಗೌರವಿಸಿ ರಾಜಕೀಯ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.