ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿಷಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಈ ದೇಶದ ಸಂವಿಧಾನಕ್ಕೆ ಬದ್ಧವಾಗಿ ನಡೆಯುತ್ತೀವೇ ಹೊರತು ಇಸ್ಲಾಂ ಕಾನೂನಿಗೆ ಅನ್ವಯವಾಗಿ ಅಲ್ಲ ಎಂದಿದ್ದಾರೆ.
ಇಸ್ಲಾಂ ಕಾನೂನು ಅಥವಾ ಷರಿಯತ್ ಕಾನೂನಿಗೆ ಅನ್ವಯವಾಗಿ ನಡೆಯುವುದಿಲ್ಲ. ಸಂವಿಧಾನವೇ ಎಲ್ಲಕ್ಕಿಂತ ಪ್ರಮುಖ. ಸಂವಿಧಾನದಲ್ಲಿ ಏನಿದೆ ಅದನ್ನು ಪಾಲಿಸುತ್ತೇವೆ ಎಂದಿದ್ದಾರೆ.
ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುರಕ್ಷಣೆಗಾಗಿ ತ್ರಿವಳಿ ತಲಾಖ್ ರದ್ದುಗೊಳಿಸಲಾಗಿದೆ. ಎಲ್ಲ ಹೆಣ್ಣುಮಕ್ಕಳನ್ನು ಗೌರವಿಸುತ್ತೇವೆ. ಈ ದೇಶದ ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ ಎಂದಿದ್ದಾರೆ.