ಹೆಂಡತಿ ಕೋಪಗೊಂಡಾಗ ಏನು ಮಾಡಬೇಕು?: ಅಸಾದುದ್ದೀನ್ ಒವೈಸಿ ಕೊಡ್ತಾರೆ ನೋಡಿ ಟಿಪ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದಾ ರಾಜಕೀಯ ಆಗುಹೋಗುಗಳ ಕುರಿತು ಮಾತನಾಡುವ AIMIM ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ವೈವಾಹಿಕ ಜೀವನ, ಸಂಬಂಧ, ಪತಿ-ಪತ್ನಿ ನಡುವಿನ ಅನ್ಯೋನ್ಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿದೆ.

ಹೈದರಾಬಾದ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅಸಾದುದ್ದೀನ್ ಒವೈಸಿ, ಪುರಷರಿಗೆ ಸುಖಿ ದಾಂಪತ್ಯ ಜೀವನದ ಸಲಹೆ ನೀಡಿದ್ದಾರೆ.

ಪತ್ನಿಯರು ಕೋಪಗೊಂಡಾಗ, ನೀವು ಕೋಪಗೊಳ್ಳಬೇಡಿ. ಕೋಪದಿಂದ ಆಕೆ ಬಯುತ್ತಿರುವಾಗ ನೀವು ಏನು ಪ್ರತಿಕ್ರಿಯೆ ನೀಡಬೇಡಿ. ಆಕೆಯ ಕೋಪಕ್ಕೆ ಕೆಲ ಕಾರಣಗಳಿರಬಹುದು, ಇಲ್ಲದೆ ಇರಬಹುದು. ಅಥವಾ ತಪ್ಪಾಗಿ ಅರ್ಥೈಸಿರಬಹುದು . ಪುರುಷರ ಸಮಾಧಾನದಿಂದ ಆಕೆಯ ಆಕ್ರೋಶದ ಮಾತುಗಳನ್ನು ಕೇಳಿಸಿಕೊಳ್ಳಿ. ಇದರಿಂದ ಅರ್ಧ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಪತ್ನಿ ಕೋಪದಲ್ಲಿರುವಾಗ ಆಕೆಯನ್ನು ನಿಯಂತ್ರಿಸಲು ಹಲ್ಲೆ ಮಾಡುವುದು, ಗದರಿಸುವುದು ಮಾಡಬಾರದು. ಮಹಿಳೆಯರ ಮೇಲೆ ಕೈ ಎತ್ತುವುದು ಸರಿಯಲ್ಲ. ಪ್ರವಾದಿ ಮೊಹಮ್ಮದರು ಯಾವತ್ತೂ ಮಹಿಳೆಯರ ಮೇಲೆ ಕೈಎತ್ತಿಲ್ಲ, ಗೌರವದಿಂದ ಕಾಣಬೇಕು. ಕೋಪ, ಆಕ್ರೋಶಗಳನ್ನು ತಾಳ್ಮೆಯಿಂದ ಕೇಳಿ, ಪರಿಹಾರ ಕಂಡುಕೊಳ್ಳಬೇಕು ಎಂದು ಒವೈಸಿ ಸಲಹೆನೀಡಿದ್ದಾರೆ.

ಇಸ್ಲಾಂನಲ್ಲಿ ಮಹಿಳೆಯರು ನಿಮಗೆ ಅಡುಗೆ ಮಾಡಿ ಆಹಾರ ನೀಡಬೇಕು, ನಿಮ್ಮ ಬಟ್ಟೆಗಳನ್ನು ತೊಳೆಯಬೇಕು ಎಂದು ಹೇಳಿಲ್ಲ. ಖುರಾನ್‌ನಲ್ಲಿ ಎಲ್ಲಿಯೂ ಪತ್ನಿ, ಪತಿಯ ಬಟ್ಟೆ ತೊಳೆದು ಕೊಡಬೇಕು ಎಂದಿಲ್ಲ. ಪತಿಗೆ ಪತ್ನಿಯ ಆದಾಯದಲ್ಲಿ ಯಾವುದೇ ಹಕ್ಕಿಲ್ಲ. ಆದರೆ ಪತ್ನಿಗೆ ಪತಿಯ ಆದಾಯದಲ್ಲಿ ಎಲ್ಲಾ ಹಕ್ಕುಗಳಿವೆ ಎಂದು ಒವೈಸಿ ಹೇಳಿದ್ದಾರೆ.

ಹಲವು ಮುಸ್ಲಿಮರು ನನ್ನ ಪತ್ನಿ ಅಡುಗೆ ಮಾಡುತ್ತಿಲ್ಲ, ಬಟ್ಟೆ ಒಗೆಯುತ್ತಿಲ್ಲ ಅನ್ನೋ ದೂರುಗಳನ್ನು ಹೇಳುವುದನ್ನು ಕೇಳಿದ್ದೇನೆ. ಆದರೆ ಖರಾನ್‌ನಲ್ಲಿ ನಿಮ್ಮ ಪತ್ನಿ ಈ ಎಲ್ಲಾ ಕೆಲಸ ಮಾಡಬೇಕು ಎಂದು ಹೇಳಿಲ್ಲ. ಪತಿ ಹಾಗೂ ಪತ್ನಿ ಇಬ್ಬರೂ ಕೆಲಸ ಹಂಚಿಕೊಂಡು, ಪರಸ್ವರ ಗೌರವದಿಂದ ನಡೆದರೆ ಮಾತ್ರ ಸುಖವಾಗಿರಬಹುದು ಎಂದು ಒವೈಸಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!