ಆರೋಗ್ಯ ಚೆನ್ನಾಗಿರಲಿ ಅಂತ ನೀವು ಏನೆಲ್ಲಾ ಒಳ್ಳೆಯ ಆಹಾರ ಸೇವಿಸೋದಿಲ್ಲ ಹೇಳಿ? ಎಲ್ಲವನ್ನೂ ಮಾಡಿದ್ರೂ ಏನೋ ಮಿಸ್ ಹೊಡೀತಾ ಇದೆ ಅನ್ನೋ ಭಾವನೆ ನಿಮ್ಮದ್ದು. ಪ್ರಾಯಶಃ ನೀವು ಎಲ್ಲಾ ಒಳ್ಳೆಯದನ್ನೇ ತಿಂತಿದ್ದೀರಿ? ಆದರೆ ಯಾವ ಸಮಯದಲ್ಲಿ ಯಾವುದು ತಿನ್ನಬೇಕು? ಎಷ್ಟು ತಿನ್ನಬೇಕು? ಯಾವ ಆಹಾರ ಮಿಕ್ಸ್ ಮಾಡಬಾರದು ಎನ್ನುವ ಮಾಹಿತಿ ತಿಳಿದುಕೊಳ್ಳಿ..
ಆರೋಗ್ಯಕರ ಡಯಟ್‌ನಲ್ಲಿ ಏನೆಲ್ಲಾ ಇರುತ್ತದೆ?
ಹಣ್ಣು, ತರಕಾರಿ, ಕಾಳು ಬೇಳೆ, ಡ್ರೈ ಫ್ರೂಟ್ಸ್, ಹೋಲ್ ಗ್ರೇನ್ಸ್( ಮಿಲ್ಲೆಟ್, ಓಟ್ಸ್, ಬ್ರೌನ್ ರೈಸ್)
ದಿನಕ್ಕೆ ಒಟ್ಟಾರೆ 400 ಗ್ರಾಂ ತರಕಾರಿ ಹಾಗೂ ಹಣ್ಣು ತಿನ್ನಬೇಕು. ಇದರಲ್ಲಿ ಗೆಣಸು, ಆಲೂಗಡ್ಡೆ ಸೇರಿಲ್ಲ.
ದಿನಕ್ಕೆ ಎರಡು ಸಾವಿರ ಕ್ಯಾಲೋರಿಯಷ್ಟು ಆಹಾರ ತಿನ್ನಬೇಕು, ಸಕ್ಕರೆ ಹಾಗೂ ಸಕ್ಕರೆಗೆ ಸಂಬಂಧಿಸಿದ ಪದಾರ್ಥಗಳಿಂದ ಕ್ಯಾಲೋರಿ ಹೆಚ್ಚು ತುಂಬುತ್ತದೆ. ಆದರೆ ಹೊಟ್ಟೆ ತುಂಬೋದಿಲ್ಲ, ಒಳ್ಳೆಯದೂ ಅಲ್ಲ.
ಮೀನು, ಬೆಣ್ಣುಹಣ್ಣು, ಸೋಯಾ, ಆಲೀವ್ ಆಯಿಲ್‌ನಲ್ಲಿನ ಫ್ಯಾಟ್ ದೇಹಕ್ಕೆ ಸೂಕ್ತ.
ಇಡೀ ದಿನಕ್ಕೆ ಒಂದು ಸ್ಪೂನ್ ಉಪ್ಪು ಸಾಕು.
ಇನ್ನಷ್ಟು ಸಲಹೆಗಳು..
- ಹಣ್ಣು ತರಕಾರಿ ಡಯಟ್‌ನಲ್ಲಿರಲಿ.
- ಸ್ನ್ಯಾಕ್ಸ್ ರೀತಿ ಹಣ್ಣು ತರಕಾರಿಯನ್ನೇ ತಿನ್ನಿ
- ಯಾವ ಯಾವ ಸೀಸನ್‌ನಲ್ಲಿ ಯಾವ ಹಣ್ಣು ತರಕಾರಿ ಸಿಗುತ್ತದೆಯೋ ಅದನ್ನು ತಿನ್ನಿ
- ಹಣ್ಣು ತರಕಾರಿಗಳ ವೆರೈಟಿ ಸೇವಿಸಿ
- ಕರಿದ ತಿಂಡಿ ಪದಾರ್ಥಗಳ ಬದಲು ಬೇಯಿಸಿದ ಪದಾರ್ಥ ಸೇವಿಸಿ
- ಬೆಣ್ಣೆ ತುಪ್ಪದ ಬದಲು ಪೊಲಿಅನ್ ಸ್ಯಾಚುರೇಟೆಡ್ ಆದ ಎಣ್ಣೆಯನ್ನು ಬಳಸಿ
- ಪ್ಯಾಕ್ ಮಾಡಿರುವ ವಸ್ತುಗಳನ್ನು ಸ್ನ್ಯಾಕ್ಸ್ ಆಗಿ ತಿನ್ನುವುದನ್ನು ಕಡಿಮೆ ಮಾಡಿ.