ಹೊಸದಿಗಂತ ವರದಿ ಶಿವಮೊಗ್ಗ :
ನಗರದ ರೈಲ್ವೆ ನಿಲ್ದಾಣದ ಬಳಿಯ ಪಾರ್ಕಿಂಗ್ಲಾಟ್ ಪಕ್ಕದ ರಸ್ತೆಯಲ್ಲಿ ಭಾನುವಾರ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಎರಡು ಬಾಕ್ಸ್ ಗಳನ್ನು ಬಾಂಬ್ ಸ್ಕ್ವಾಡ್ ಇಂದು ಬೆಳಗಿನಜಾವ ತೆರೆದಿದ್ದು ಇವುಗಳಲ್ಲಿ ಬಿಳಿ ಪೌಡರ್ ಪತ್ತೆಯಾಗಿದೆ.
ರಾತ್ರಿಯೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿ ಕಾರ್ಯಾಚರಣೆ ನಡೆಸಿತ್ತಾದರೂ ಮಳೆಯಿಂದಾಗಿ ಅಡ್ಡಿಯಾಗಿತ್ತು. ಸತತ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಬೆಳಗಿನಜಾವ ಎರಡೂ ಬಾಕ್ಸ್ ಗಳ ಬೀಗ ಒಡೆದು ತೆರೆದಾಗ ಅವುಗಳಲ್ಲಿ ಬಿಳಿ ಪೌಡರ್ ಇರುವುದು ಗೊತ್ತಾಗಿದೆ. ಇದರ ಶೀಲ್ ಮಾಡಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇವುಗಳಲ್ಲಿರುವುದು ತ್ಯಾಜ್ಯವಸ್ತುವೆಂದು ಎಸ್ ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.