ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಟ ರಣಬೀರ್ ಕಪೂರ್ ಹಾಡಿ ಹೊಗಳಿದ್ದಾರೆ.
ರಾಜಕೀಯದ ಬಗ್ಗೆ ಏನು ಹೇಳುತ್ತೀರಿ ಎಂದು ರಣಬೀರ್ ಅವರಲ್ಲಿ ಕೇಳಿದಾಗ, ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಕುರಿತು ಹೇಳಿದ್ದಾರೆ.
ನಾಲ್ಕೈದು ವರ್ಷಗಳ ಹಿಂದೆ ನಾವು ಕೆಲವು ನಟರು ಮತ್ತು ನಿರ್ದೇಶಕರು ಭೇಟಿಯಾಗಲು ಹೋಗಿದ್ದೆವು. ಪ್ರಧಾನಿ ಅವರ ಭಾಷಣವನ್ನು ಟಿ.ವಿಯಲ್ಲಿ, ಫೋನ್ನಲ್ಲಿ ಕೇಳಿದ್ದೆ. ಆದರೆ ಅವರನ್ನು ಭೇಟಿಯಾಗಲು ಹೋದಾಗ ಆ ಕ್ಷಣವೇ ರೋಮಾಂಚನಕಾರಿ ಎಂದಿದ್ದಾರೆ. ಪ್ರಧಾನಿ ಮೋದಿ ಅವರು ಎಲ್ಲರನ್ನೂ ಸೆಳೆಯುವ ಕಾಂತೀಯ ಗುಣ ‘ಮ್ಯಾಗ್ನೆಟಿಕ್ ಚಾರ್ಮ್’ ಹೊಂದಿದ್ದಾರೆ. ಅವರನ್ನು ಭೇಟಿಯಾಗಿ ತುಂಬಾ ಖುಷಿಯಾಯಿತು ಎಂದಿದ್ದಾರೆ.
ಪ್ರಧಾನಿಯವರನ್ನು ಭೇಟಿಯಾಗಲು ನಾನು, ಆಲಿಯಾ ಭಟ್, ವಿಕ್ಕಿ ಕೌಶಲ್, ಕರಣ್ ಜೋಹರ್, ಶಾರುಖ್ ಖಾನ್ ಸೇರಿದಂತೆ ಕೆಲವರು ಹೋಗಿದ್ವಿ. ಅವರು ನಮ್ಮನ್ನು ಕುಳ್ಳರಿಸಿ ಎದುರಿಗೆ ಕುಳಿತುಕೊಂಡರು. ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಅವರು ಪ್ರತಿಯೊಬ್ಬರಲ್ಲಿಯೂ ಅವರವರ ಪರ್ಸನಲ್ ಲೈಫ್ ಕುರಿತು ಮಾತನಾಡಿದರು. ಅಂಥ ದೊಡ್ಡ ವ್ಯಕ್ತಿ ಅವರು. ನಮ್ಮ ಪ್ರತಿಯೊಬ್ಬರ ವೈಯಕ್ತಿಕ ಬದುಕು ಕೂಡ ಅವರಿಗೆ ತಿಳಿದಿರುವುದು ಅಚ್ಚರಿಯುಂಟು ಮಾಡಿತು ಎಂದಿದ್ದಾರೆ.
ಆಗ ನನ್ನ ತಂದೆಯ ಟ್ರೀಟ್ಮೆಂಟ್ ನಡೆಯುತ್ತಿತ್ತು. ಅದು ಅವರಿಗೆ ತಿಳಿದು ಅದರ ಬಗ್ಗೆ ಪ್ರಶ್ನಿಸಿದರು. ಆಲಿಯಾಗೆ ಆಕೆಯ ವೈಯಕ್ತಿಕ ಜೀವನದ ವಿಷಯ, ಹಾಗೆನೇ ವಿಕ್ಕಿ ಕೌಶಲ್, ಕರಣ್ ಜೋಹರ್, ಶಾರುಖ್ ಖಾನ್ ಹೀಗೆ ಪ್ರತಿಯೊಬ್ಬರಿಗೂ ವಿಭಿನ್ನವಾಗಿಯೇ ಮಾತನಾಡಿದರು. ಅವರ ವೈಯಕ್ತಿಕ ಬದುಕಿನ ಪ್ರಶ್ನೆ ಕೇಳಿದರು ಎಂದು ರಣಬೀರ್ ಕಪೂರ್ ನೆನಪಿಸಿಕೊಂಡಿದ್ದಾರೆ.
ಹೀಗೆ ಪ್ರತಿಯೊಬ್ಬರ ಬಗ್ಗೆ ತಿಳಿದುಕೊಳ್ಳುವ ಎಫರ್ಟ್ ದೊಡ್ಡ ಮನುಷ್ಯರಲ್ಲಿ ಮಾತ್ರ ಕಾಣಲು ಸಾಧ್ಯ. ಅಂಥ ಅಂತಹ ಪ್ರಯತ್ನಗಳನ್ನು ಮಹಾನ್ ವ್ಯಕ್ತಿಗಳು ನೀಡಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಅಂಥ ಮಹಾನ್ ವ್ಯಕ್ತಿತ್ವ ಕಂಡೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಇದಾಗಲೇ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್, ಶಾರುಖ್ ಖಾನ್ ಸೇರಿದಂತೆ ಹಲವರು ಪ್ರಧಾನಿಯವರನ್ನು ವಿಭಿನ್ನ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.