ಇಸ್ರೋದ 101ನೇ ಮಿಷನ್ ಫೇಲ್​ ಆಗೋಕೆ ಕಾರಣ ಏನು? ಮುಖ್ಯಸ್ಥರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಬೆಳ್ಳಂಬೆಳಗ್ಗೆ ಶ್ರೀಹರಿಕೋಟಾದಿಂದ ಸುಗಮವಾಗಿ ಉಡಾವಣೆಗೊಂಡ ಇಸ್ರೋದ 101ನೇ ಮಿಷನ್ ಫೇಲ್​ ಆಗಿದೆ. ಇದು ವಿಜ್ಞಾನಿಗಳು ಹಾಗೂ ಜನರಿಗೆ ಬೇಸರ ಉಂಟುಮಾಡಿದೆ. ಎಷ್ಟೆಲ್ಲಾ ತಯಾರಿ ನಂತರ ಆದ ಮಿಷನ್‌ ಫೇಲ್‌ ಆಗಿದ್ದು ಏಕೆ ಎನ್ನುವ ಪ್ರಶ್ನೆ ಎದುರಾಗಿದೆ.

ಈ  ಬಗ್ಗೆ ಇಸ್ರೋ ಮುಖ್ಯಸ್ಥ ವಿ ನಾರಾಯಣನ್ ಮಾತನಾಡಿದ್ದು, ಇಂದು ನಾವು PSLV-C61 ವಾಹನದ ಉಡಾವಣೆಗೆ ಪ್ರಯತ್ನಿಸಿದ್ದೇವೆ. ಈ ವಾಹನವು 4-ಹಂತದ ವಾಹನವಾಗಿದೆ. ಮೊದಲ ಎರಡು ಹಂತಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು. 3 ನೇ ಹಂತದಲ್ಲಿ, ನಾವು ವೀಕ್ಷಣೆಯನ್ನು ನೋಡುತ್ತಿದ್ದೆವು. ಆದರೆ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ನಾವು ಸಂಪೂರ್ಣ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡುತ್ತಿದ್ದೇವೆ, ನಾವು ಸಾಧ್ಯವಾದಷ್ಟು ಬೇಗ ಹಿಂತಿರುಗುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!