ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಕುರಿತು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪದ ಪಾಶ ಉಚ್ಚಿದರೆ ಎಲ್ಲವು ಸರಿಯಾಗುತ್ತೆ. ಈಗ ನಾವು ಪಾಯಸ ಮಾಡುವಾಗ ಬೆಲ್ಲ ಹಾಕಿ ಪಾಯಸ ಮಾಡುತ್ತೇವೆ. ಅದಕ್ಕೆ ಬೆಲ್ಲದಲ್ಲೇ ಕೊಳೆ ಇರುತ್ತದೆ. ಪಾಯಸ ಉಕ್ಕಿದಾಗ ಮೇಲೆ ಕೊಳೆ ಬರುತ್ತೆ. ಕೊಳೆ ತೆಗೆದಾಗ ಪಾಯಸ ಸಿಹಿಯಾಗುತ್ತದೆ. ಹಾಗೆ ಮನುಷ್ಯನ ಪಾಪ ಹೋಗಬೇಕು. ತಾನು ಮಾಡಿದ ಕರ್ಮ ಬಲವಂತವಾದರೆ ಯಾರೇನು ಮಾಡುವರು. ಮನುಷ್ಯ ಪುಣ್ಯ ಮಾಡೋಕೆ ಹೆದರಬಾರದು, ಪಾಪ ಮಾಡೋಕೆ ಹೆದರಬೇಕು. ಆದರೆ ನಾವು ಪಾಪ ಮಾಡೋಕೆ ಹೆದರುವುದಿಲ್ಲ ಪುಣ್ಯ ಮಾಡೋಕೆ ಹೆದರುತ್ತಿದ್ದೇವೆ ಎಂದು ಅವರು ತಿಳಿಸಿದರು.