CINE | ಮದುವೆ ಆಗದಿದ್ರೆ ಏನಾಗತ್ತೆ? ವೆಡ್ಡಿಂಗ್‌ ಯಾವಾಗ ಅನ್ನೋ ಜನರಿಗೆ ನಟಿ ತ್ರಿಶಾ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆ ಆಗದಿದ್ರೆ ಏನಾಗತ್ತೆ? ನನಗೆ ಮದುವೆ ಬಗ್ಗೆ ಆಸಕ್ತಿ ಇಲ್ಲ ಎಂದು ನಟಿ ತ್ರಿಶಾ ಕೃಷ್ಣನ್‌ ಹೇಳಿದ್ದಾರೆ.

ತ್ರಿಶಾ ಕೃಷ್ಣನ್​​ ಪ್ರಮುಖ ಪಾತ್ರದಲ್ಲಿ ನಟಿಸಿರುವ ಇತ್ತೀಚಿನ ಚಿತ್ರ ‘ಥಗ್ ಲೈಫ್’. ಶುಕ್ರವಾರ, ಚೆನ್ನೈನಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ನಟಿಗೆ ಮತ್ತೆ ಮದುವೆ ಪ್ಲಾನ್​​ ಗಳ ಬಗ್ಗೆ ಪ್ರಶ್ನೆಗಳು​ ಎದುರಾದವು.

ಮದುವೆ ಕಾನ್ಸೆಪ್ಟ್​​​​​ನಲ್ಲಿ ನಂಬಿಕೆ ಇಡುವುದಿಲ್ಲ ಎಂದು ನಟಿ ಹೇಳಿದರು. ”ಮದುವೆ ಆಗುತ್ತೋ? ಇಲ್ಲವೋ? ಎರಡಕ್ಕೂ ಓಕೆ. ನನಗೆ ಮದುವೆ ಆಗುವ ಉದ್ದೇಶವಿಲ್ಲ, ನಾನು ಮದುವೆಯಾದರೂ ಸರಿ, ಮದುವೆಯಾಗದಿದ್ದರೂ ಪರವಾಗಿಲ್ಲ” ಎಂದು ತಿಳಿಸಿದರು.

ಕಳೆದ ತಿಂಗಳು ತ್ರಿಶಾ ಹಂಚಿಕೊಂಡ ಪೋಸ್ಟ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಸಿರು ಸೀರೆ ಧರಿಸಿ ಸಾಂಪ್ರದಾಯಿಕವಾಗಿ ಕಂಗೊಳಿಸಿದ್ದರು. ಫೋಟೋದಲ್ಲಿ, ಅವರ ಉಂಗುರ ಎದ್ದು ಕಾಣುತ್ತಿತ್ತು. ಅಲ್ಲದೇ, ತಮ್ಮ ಈ ಪೋಸ್ಟ್‌ಗಳಿಗೆ ‘ಪ್ರೀತಿ ಯಾವಾಗಲೂ ಗೆಲ್ಲುತ್ತದೆ’ ಎಂಬ ಆಕರ್ಷಕ ಕ್ಯಾಪ್ಷನ್​ ಕೊಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here