ಅಷ್ಟೊಂದು ನಗು ಬರೋಕೆ ಕಾರಣ ಏನು? ಪ್ರಶ್ನೆಗೆ ʼಪ್ರೀತಿʼಯಿಂದ ಉತ್ತರಿಸಿದ ಝಿಂಟಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಪ್ರೀತಿ ಝಿಂಟಾ ಹಲವು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರ ತಂಡ ಈ ಬಾರಿ ಉತ್ತಮವಾಗಿ ಆಡುತ್ತಿದೆ.

ಇತ್ತೀಚೆಗೆ ನ್ಯೂ ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್ ಪಂದ್ಯ ನಡೆಯಿತು. ಆಗ ನಡೆದ ಒಂದು ಖುಷಿಯ ಕ್ಷಣದ ಫೋಟೋ ಬಗ್ಗೆ ಪ್ರೀತಿ ಮಾತನಾಡಿದ್ದಾರೆ. ವಿರಾಟ್ ಹಾಗೂ ಪ್ರೀತಿ ಜಿಂಟಾ ಪರಸ್ಪರ ನಿಂತು ಮಾತನಾಡುತ್ತಿದ್ದರು. ಈ ವೇಳೆ ಪ್ರೀತಿ ಹಾಗೂ ವಿರಾಟ್ ಖುಷಿಯಲ್ಲಿ ಇತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

ಪ್ರೀತಿ ಜಿಂಟಾ ಅವರು ಇತ್ತೀಚೆಗೆ ಟ್ವಿಟರ್​ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಈ ವೇಳೆ ವಿರಾಟ್ ಹಾಗೂ ಪ್ರೀತಿ ಪರಸ್ಪರ ನಗುತ್ತಿರುವ ಫೋಟೋ ಇದೆ. ಈ ಬಗ್ಗೆ ಪ್ರೀತಿ ಜಿಂಟಾಗೆ ಪ್ರಶ್ನೆ ಮಾಡಲಾಗಿದೆ. ‘ವಿರಾಟ್ ಅವರ ಬಳಿ ಏನು ಮಾತನಾಡುತ್ತಿದ್ದಿರಿ’ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರೀತಿ ಉತ್ತರಿಸಿದ್ದಾರೆ.

ನಾವು ನಮ್ಮ ಮಕ್ಕಳ ಚಿತ್ರಗಳನ್ನು ಪರಸ್ಪರ ತೋರಿಸಿಕೊಳ್ಳುತ್ತಿದ್ದೆವು. ಮತ್ತು ಅವರ ಬಗ್ಗೆ ಮಾತನಾಡುತ್ತಿದ್ದೆವು. ಸಮಯ ಕಳೆಯುತ್ತಲೇ ಇರುತ್ತದೆ. 18 ವರ್ಷಗಳ ಹಿಂದೆ ನಾನು ವಿರಾಟ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರು ಉತ್ಸಾಹ ಭರಿತರಾಗಿದ್ದರು. ಈಗಲೂ ಅವರಲ್ಲಿ ಉತ್ಸಾಹ ಇದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!