ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸತತವಾಗಿ ಆರೋಪಗಳನ್ನು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,ವರ್ಗಾವಣೆ ದಂಧೆ ಸಂಬಂಧಿಸಿದ ದಾಖಲೆ ಇದೆ ಎನ್ನಲಾಗಿರುವ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಸಿದ್ದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದು, ಆದ್ರೆ ಇಂದು ಕೂಡ ಪೆನ್ ಡ್ರೈವ್ ಬಿಡುಗಡೆ ಮಾಡಿಲ್ಲ.
ಈ ಕುರಿತು ಸುದ್ದಿಗಾರರ ಜೊತೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅರ್ಜೆಂಟ್ ಏನಿದೆ ಬ್ರದರ್, ಇನ್ನೂ ಟೈಮ್ ಇದೆ. ಸಮಯ ಬಂದಾಗ ಪೆನ್ ಡ್ರೈವ್ ರಹಸ್ಯ ಬಯಲಾಗಲಿದೆ ಎಂದರು.
ರಾಜ್ಯ ಸರ್ಕಾರದ 4 ಇಲಾಖೆಗಳ ವರ್ಗಾವಣೆ ದಂಧೆಯಲ್ಲಿ ಮೂವರು ಪ್ರಭಾವಿಗಳ ಸಂಭಾಷಣೆ ಬಗ್ಗೆ ಮಾಹಿತಿ ಸಂಗ್ರಹ ಮಾಡಿರುವ ಕುಮಾರಸ್ವಾಮಿ. ಪೆನ್ಡ್ರೈವ್ ನಲ್ಲಿ ಪ್ರಮುಖ ಅಧಿಕಾರಿಗಳ ವಿಚಾರದಲ್ಲಿ ಸಂಭಾಷಣೆ ನಡೆಸಿರುವ ಆಡಿಯೋ ಇದೆ ಎನ್ನಲಾಗಿದೆ. ಪೆನ್ ಡ್ರೈವ್ ಬಿಡುಗಡೆಯಾದ್ರೆ ಪ್ರಭಾವಿ ಸಚಿವರೊಬ್ಬರು ರಾಜೀನಾಮ ನೀಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.