ವಾಟ್ಸಾಪ್ ಡೌನ್, ದೇಶದ ಹಲವು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಹಲವು ಭಾಗಗಳಲ್ಲಿ ವಾಟ್ಸಾಪ್ ಡೌನ್ ಆಗಿದ್ದು, ಯಾವುದೇ ಸಂದೇಶ ಕಳುಹಿಸಲು ಅಥವಾ ಪಡೆಯಲು ಸಾಧ್ಯವಾಗುತ್ತಿಲ್ಲ.

ಇಂದು ಮಧ್ಯಾಹ್ನ 12:30 ರ ನಂತರ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿಲ್ಲ. ವಾಟ್ಸಾಪ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ.

ಆಂಡ್ರ್ಯಾಯ್ಡ್, ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್‌ಗಳಲ್ಲಿಯೂ ವಾಟ್ಸಾಪ್ ಕೆಲಸ ಮಾಡುತ್ತಿಲ್ಲ. ಯಾವುದೇ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ, ಹಾಗೇ ಯಾವುದೇ ಸಂದೇಶ ಬರುತ್ತಿಲ್ಲ. ಸ್ಟೇಟಸ್ ಅಪ್ ಲೋಡ್ ಆಗುತ್ತಿಲ್ಲ. ಈ ಬಗ್ಗೆ ಮೆಟಾಗೆ ಜನ ದೂರು ನೀಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಎರಡು ಸಾವಿರಕ್ಕೂ ಹೆಚ್ಚು ಮಂದಿ ವಾಟ್ಸಾಪ್ ಬಳಕೆ ಮಾಡಲು ಆಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಶೇ.69 ರಷ್ಟು ಮಂದಿ ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!