ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ WhatsApp ಹೊಸ ಫೀಚರ್ ಒಂದನ್ನು ಪರಿಚಯಿಸಿದ್ದು, ಅದರಲ್ಲೂ ‘ಡ್ರಾಫ್ಟ್’ ಟ್ಯಾಬ್ ಪ್ರಮುಖವಾಗಿದೆ. ಈ ಹೊಸ ಫೀಚರ್ ಬಳಕೆದಾರರಿಗೆ ಕಳಿಸದ ಮೆಸೇಜ್ಗಳನ್ನು ಸುಲಭವಾಗಿ ನೋಡಲು ಅನುಕೂಲವಾಗಲಿದೆ. ಈ ಸೌಲಭ್ಯ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಇದೆ.
ಮೆಸೇಜ್ ಮಿಸ್ ಆಗೋ ಸಾಧ್ಯತೆ ಇಲ್ಲ!
ಹೆಚ್ಚುಬಾರಿ ಬಳಕೆದಾರರು ಮೆಸೇಜ್ ಟೈಪ್ ಮಾಡಿ ಕಳಿಸಲು ಮರೆತು ಬಿಡುತ್ತಾರೆ. ಹಳೆಯ WhatsAppನಲ್ಲಿ ಡ್ರಾಫ್ಟ್ ಫೋಲ್ಡರ್ ಎಂಬುದಿಲ್ಲದ ಕಾರಣದಿಂದ, ಅಂತಹ ಚಾಟ್ಗಳನ್ನು ಹುಡುಕಲು ಚಾಟ್ಗಳಲ್ಲಿ ಸ್ಕ್ರೋಲ್ ಮಾಡಬೇಕಾಗುತ್ತಿತ್ತು. ಆದರೆ ಹೊಸ ‘ಡ್ರಾಫ್ಟ್’ ಟ್ಯಾಬ್ ಮೂಲಕ ಈಗ ಇಅದನ್ನು ಸುಲಭಗೊಳಿಸಲಾಗಿದೆ.
ಆಂಡ್ರಾಯ್ಡ್ ಬಿಟಾ ಬಳಕೆದಾರರಿಗಾಗಿಯೇ ಈ ಹೊಸ ಫೀಚರ್ ಲಭ್ಯವಾಗಿದ್ದು, ಚಾಟ್ ಫೀಡ್ನಲ್ಲಿ ‘Preset Draft List’ ಎಂಬ ಆಯ್ಕೆ ಸೇರಿಸಲಾಗಿದೆ. ಇದರಿಂದ ಎಲ್ಲ ಡ್ರಾಫ್ಟ್ ಮೆಸೇಜ್ಗಳನ್ನು ಒಂದು ಕಡೆ ನೋಡಲು ಸಾಧ್ಯವಾಗುತ್ತದೆ.
ಈ ಹೊಸ ವ್ಯವಸ್ಥೆಯಲ್ಲಿ, ಈಗಾಗಲೇ ಇರುವ ‘All’ ಮತ್ತು ‘Favorites’ ಪಕ್ಕದಲ್ಲೇ ‘Draft’ ಎಂಬ ಹೊಸ ಟ್ಯಾಬ್ ಕೂಡ ಸೇರಿಸಲಾಗುತ್ತದೆ. ಈ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ, ನೀವು ಕಳಿಸದೇ ಉಳಿಸಿಕೊಂಡಿರುವ ಎಲ್ಲಾ ಚಾಟ್ಗಳು ಕಾಣಿಸುತ್ತವೆ.
ಈ ಡ್ರಾಫ್ಟ್ ಫಿಲ್ಟರ್ ಅನ್ನು WhatsApp ಆಟೋಮ್ಯಾಟಿಕ್ ಆಗಿ ಸೆಟ್ ಮಾಡುತ್ತಿದ್ದು, ಮೊದಲಿಗೆ ಬಿಟಾ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಮುಂದಿನ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಈ ಅಪ್ಡೇಟ್ ನಿರೀಕ್ಷೆಯಿದೆ.