ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಧಿ ದಾಸ್ತಾನು ಮೇಲೆ ಕೇಂದ್ರ ಸರ್ಕಾರ ನಿಗಾ ವಹಿಸಿದ್ದು, ಎಲ್ಲಾ ವರ್ತಕರು ಏಪ್ರಿಲ್ 1ರಿಂದ ಗೋಧಿ ದಾಸ್ತಾನು ವಿವರವನ್ನು ಕಡ್ಡಾಯವಾಗಿ ದಾಖಲಿಸಬೇಕು ಎಂದು ಕೇಂದ್ರ ಆಹಾರ ಇಲಾಖೆ ಖಡಕ್ ಸೂಚನೆ ನೀಡಿದೆ.
ದೇಶದಲ್ಲಿ ಆಹಾರ ಭದ್ರತೆ ಕಲ್ಪಿಸಲು ಮತ್ತು ಊಹಾಪೋಹಗಳನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪಾರಿಗಳು, ವರ್ತಕರು ಮತ್ತು ಸಂಸ್ಕರಣಾಕಾರರು ಗೋಧಿ ದಾಸ್ತಾನು ಘೋಷಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.