ಎಲ್ಲವೂ ನಾರ್ಮಲ್ ಆಗಿಯೇ ಇರುತ್ತದೆ, ಕೆಲಸ, ಮನೆ, ಫ್ಯಾಮಿಲಿ, ಫ್ರೆಂಡ್ಸ್, ಸೋಶಿಯಲ್ ಲೈಫ್, ಜಿಮ್ ಹೀಗೆ.. ದಿನ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ. ಆದರೆ ಯಾವುದೋ ಒಂದು ಕ್ಷಣದಲ್ಲಿ ಜೀವನ Pause ಆದಂತೆ ಅನಿಸುತ್ತದೆ. ನಾವು ಭೂಮಿ ಮೇಲೆ ಇರೋದು ಯಾಕೆ? ನಮ್ಮ ಜೀವನ ಸಾರ್ಥಕ ಅನಿಸೋದು ಹೇಗೆ? ನಾನು ಮಾಡ್ತಿರೋದು ಸಾಕಾ? ಇನ್ನೂ ಬೇಕಾ? ಹೀಗೆ ನೂರಾರು ಪ್ರಶ್ನೆಗಳು ಏಳುತ್ತವೆ. ಸಾರ್ಥಕತೆ ಅನ್ನೋದನ್ನು ಅಳೆಯೋದಕ್ಕೆ ಯಾವುದೇ ಮಾಪನ ಇಲ್ಲ. ಆದರೆ ಈ ಕೆಲಸಗಳಲ್ಲಿ ಸಾರ್ಥಕತೆ ಸಿಗುತ್ತದೆ ಎಂದು ಹೇಳಲಾಗುತ್ತದೆ.
1. ಸಂಬಂಧಗಳನ್ನು ಬೆಳೆಸಬೇಕು. ಪಕ್ಕದ ಮನೆಯವರ ಹೆಸರು ಗೊತ್ತಿಲ್ಲ! ನೆಂಟರ ಮನೆಗೆ ಹೋಗೋದಿಲ್ಲ, ಸ್ನೇಹಿತರ ಭೇಟಿ ವರ್ಷಕ್ಕೊಮ್ಮೆ, ಆಫೀಸ್ ಸ್ನೇಹಿತರು ಆಫೀಸ್‌ಗಷ್ಟೇ ಸೀಮಿತ.. ಹೀಗೆ ಮಾಡುತ್ತಾ ಹೋದರೆ ಸಂಬಂಧಗಳು ಬೆಳೆಯೋದು ಹೇಗೆ? ಸ್ನೇಹಿತರನ್ನು ಮಾಡಿಕೊಳ್ಳಿ. ಕರುಣೆಯನ್ನು ಬೆಳೆಸಿಕೊಳ್ಳಿ. ಪ್ರತಿದಿನ ಹಾಲು ತರೋದಕ್ಕೆ ಹೋಗುವ ಅಂಗಡಿಯವರ ಬಗ್ಗೆ ಸಣ್ಣ ಪುಟ್ಟ ಮಾಹಿತಿ ತಿಳಿದುಕೊಳ್ಳಿ.. ಜನಬಳಕೆ ಮಾಡಿ.
2. ಎಲ್ಲ ವಿಷಯಗಳಲ್ಲಿಯೂ ನಿಮಗೆ ಒಳ್ಳೆಯದು ಏನು ಸಿಕ್ಕಿದೆ ಎನ್ನುವ ಬಗ್ಗೆ ಫೋಕಸ್ ಮಾಡಿ. ಕೆಟ್ಟದ್ದನ್ನು ಬೈಯುವುದು ಇದ್ದಿದ್ದೇ, ಬಟ್ ಪಾಸಿಟಿವ್ ಸೈಡ್‌ನ್ನು ಹೊಗಳೋದು ಯಾರು?
3. ಕರುಣೆ ತೋರಿ. ಕೈಲಾಗದವರ ಬಗ್ಗೆ ತಮಾಷೆ ಮಾಡುವುದು ಬೇಡ, ಕನಿಕರ ಸದಾ ಇರಲಿ. ಇದು ನಿಮ್ಮನ್ನು ಕಾಪಾಡುತ್ತದೆ.
4. ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯವೇ ಭಾಗ್ಯ. ವ್ಯಾಯಾಮ, ಯೋಗ ಹೀಗೆ ನಿಮ್ಮ ದೇಹವೇ ದೇಗುಲದಂತೆ ಕಾಪಾಡಿ.
5. ಸಮಸ್ಯೆಗಳಿಂದ ಓಡಿಹೋಗಬೇಡಿ. ಎದುರಿಸಿ. ಅದಕ್ಕೆ ಸೊಲ್ಯುಷನ್ ಹುಡುಕಿ. ಸೋಲಾದರೂ ಅನುಭವಿಸಿ, ಅದರಿಂದ ಪಾಠ ಕಲಿಯಿರಿ.