ಹಿಂದು ಧರ್ಮದಲ್ಲಿ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು “ಗುರು ಪೂರ್ಣಿಮೆ” ಎಂದೇ ಕರೆಯಲಾಗುತ್ತದೆ. ಇದು ಕೇವಲ ಪವಿತ್ರ ದಿನವಲ್ಲ, ಗುರುಗಳ ಮಹತ್ವವನ್ನು ನೆನೆಸಿಕೊಳ್ಳುವ ಹಾಗೂ ಅವರಿಗೆ ಕೃತಜ್ಞತೆ ಸಲ್ಲಿಸುವ ವಿಶೇಷ ಅವಕಾಶವಾಗಿದೆ. ವೇದಗಳ ರಚಯಿತ ಮಹರ್ಷಿ ವ್ಯಾಸರ ಜನ್ಮದಿನವಾದ ಕಾರಣ ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದು ಕೂಡ ಕರೆಯಲಾಗುತ್ತದೆ.
2025ರ ಗುರು ಪೂರ್ಣಿಮೆ ಯಾವಾಗ?
ಈ ವರ್ಷ, ಗುರು ಪೂರ್ಣಿಮೆಯು ಜುಲೈ 10, 2025ರ ಗುರುವಾರದಂದು ಬರುತ್ತದೆ. ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ಇದಕ್ಕೆ ಅತ್ಯಂತ ಮಹತ್ವವಿದೆ. ಈ ದಿನದಂದು ಗುರು ಶಿಷ್ಯ ಸಂಬಂಧದ ಪವಿತ್ರತೆಯನ್ನು ಗುರುತಿಸಲಾಗುತ್ತದೆ.
ಗುರು ಪೂರ್ಣಿಮೆ ಆಚರಣೆಯ ಹಿನ್ನೆಲೆ ಮತ್ತು ಮಹತ್ವ
ಭಾರತೀಯ ಸಂಸ್ಕೃತಿಯಲ್ಲಿ ಗುರು ಒಂದು ದಿವ್ಯ ಸ್ಥಾನವಿದೆ. ಅವರು ಜ್ಞಾನ ಕೊಡುವವ, ಮಾರ್ಗದರ್ಶಕರೂ ಹೌದು. ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಮುಂತಾದ ಮಹಾನ್ ಗುರುಗಳನ್ನು ಈ ದಿನ ಸ್ಮರಿಸಲಾಗುತ್ತದೆ. ಗುರು ದೇವರಿಗಿಂತ ಮೇಲೆಯೆಂದು ಪರಿಗಣಿಸೋದು, ಅವರು ತೋರಿಸುವ ಬುದ್ಧಿವಂತಿಕೆಯ ಬೆಳಕೇ ಜೀವದ ಮುಕ್ತಿಗೆ ದಾರಿ ಎಂಬ ನಂಬಿಕೆಯಿಂದ.
ಈ ದಿನ ಏನು ಮಾಡಬೇಕು?
ಗುರು ಪೂರ್ಣಿಮೆಯ ದಿನದಂದು ಹಳದಿ ಬಣ್ಣದ ಸಿಹಿತಿಂಡಿಗಳನ್ನು ಪೂಜೆಗೆ ಅರ್ಪಿಸಿ ಹಾಗೂ ಪ್ರಸಾದವಾಗಿ ಬಡವರಿಗೆ ವಿತರಿಸಿ. ಇದು ಉದ್ಯೋಗದಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.
ಗುರು ಪೂರ್ಣಿಮೆಯಂದು ಹಳದಿ ಬಟ್ಟೆ, ಧಾನ್ಯ, ಅಥವಾ ಸಿಹಿತಿಂಡಿಗಳನ್ನು ಬಡವರಿಗೆ ದಾನ ಮಾಡುವುದರಿಂದ ಧನಸಂಪತ್ತು, ಸಮೃದ್ಧಿ ನಿಮ್ಮ ಮನೆಗೆ ಬರುತ್ತದೆ ಎನ್ನಲಾಗುತ್ತದೆ.
ಮನೆಯಲ್ಲೇ ಗುರು ಯಂತ್ರವನ್ನು ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜೆ ಸಲ್ಲಿಸಿ. ಇದರಿಂದ ವೈವಾಹಿಕ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಎಂಬ ನಂಬಿಕೆ ಇದೆ.
ನಿಮ್ಮ ಜಾತಕದಲ್ಲಿ ಗುರು ದುರ್ಬಲವಾಗಿದೆ ಎಂಬುದು ತಿಳಿದಿದ್ದರೆ, ಈ ದಿನ ಹಳದಿ ಬೇಳೆ, ಅರಿಶಿನ, ಬಾಳೆಹಣ್ಣು, ಕಡಲೆ ಹಿಟ್ಟು ಲಡ್ಡು ಮುಂತಾದ ಹಳದಿ ವಸ್ತುಗಳನ್ನು ದಾನ ಮಾಡಿ. ಇದರಿಂದ ಜಾತಕದ ಗ್ರಹ ಬಲವರ್ಧನೆಗೊಳ್ಳುತ್ತದೆ.
ಗುರು ಪೂರ್ಣಿಮೆ ದಿನ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಕೇವಲ ಆಚರಣೆ ಅಲ್ಲ, ಬದಲಿಗೆ ಜೀವನದಲ್ಲಿ ಮಾರ್ಗದರ್ಶನ ನೀಡಿದ ಎಲ್ಲರನ್ನೂ ಸ್ಮರಿಸಿ ಗೌರವ ಸಲ್ಲಿಸುವ ಸಂದರ್ಭ. ಜ್ಞಾನ, ಧರ್ಮ, ಶಾಂತಿ, ಮತ್ತು ವೈವಾಹಿಕ ಸಂತೋಷ.
ಈ ವರ್ಷ ನೀವೂ ಸಹ ನಿಮ್ಮ ಜೀವನದ ಗುರುಗಳನ್ನು ಸ್ಮರಿಸಿ, ಗೌರವಿಸಿ, ನಿಮ್ಮ ಜೀವನದಲ್ಲಿ ಶಕ್ತಿಶಾಲಿ ಬದಲಾವಣೆಗಳಿಗೆ ಅವಕಾಶ ನೀಡಿ.