ಈ ಬಾರಿ ಶ್ರೀರಾಮನವಮಿ ಯಾವಾಗ? ಈ ಹಬ್ಬವನ್ನು ಯಾಕೆ ಆಚರಣೆ ಮಾಡ್ಬೇಕು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶ್ರೀರಾಮನವಮಿಯನ್ನು ಶ್ರೀ ರಾಮಚಂದ್ರನ ಹುಟ್ಟುಹಬ್ಬ ಮಾತ್ರವಲ್ಲದೇ, ಸೀತಾ ಮಾತೆಯೊಂದಿಗಿನ ವಿವಾಹ ಮತ್ತು ಶ್ರೀ ರಾಮಪಟ್ಟಾಭಿಷೇಕದ ದಿನವಾಗಿಯೂ ಆಚರಿಸಲಾಗುತ್ತದೆ.

ಈ ವಿಶೇಷ ದಿನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯಂದು ನಡೆಯುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬರುತ್ತದೆ. ಈ ದಿನ ಶ್ರೀರಾಮನ ಭಕ್ತರು ಉಪವಾಸ ಕೈಗೊಂಡು ರಾಮಾಯಣವನ್ನು ಪಠಿಸುತ್ತಾರೆ, ಭಜನೆಗಳನ್ನು ಮಾಡುತ್ತಾರೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಶುಕ್ಲಪಕ್ಷ ನವಮಿ ತಿಥಿ ಏಪ್ರಿಲ್ 5 ರ ಸಂಜೆ 7:26 ಗಂಟೆಗೆ ಪ್ರಾರಂಭವಾಗುತ್ತದೆ. ಈ ತಿಥಿ ಏಪ್ರಿಲ್ 6 ರಂದು ಸಂಜೆ 7:22 ಗಂಟೆಗೆ ಮುಕ್ತಾಯವಾಗುತ್ತದೆ. ಹಿಂದೂ ಧರ್ಮದಲ್ಲಿ ಉದಯತಿಥಿಯನ್ನು ಪ್ರಾಥಮಿಕವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಈ ವರ್ಷ 2025 ರಲ್ಲಿ ಶ್ರೀ ರಾಮ ನವಮಿ ಏಪ್ರಿಲ್ 6 ರಂದು ನಡೆಯಲಿದೆ.

ಶ್ರೀ ರಾಮ ನವಮಿ ಹಬ್ಬವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಧರ್ಮವನ್ನು ಸ್ಥಾಪಿಸಲು ಮತ್ತು ಅಧರ್ಮವನ್ನು ನಾಶಮಾಡಲು ಮಾನವನಾಗಿ ಶ್ರೀ ಮಹಾವಿಷ್ಣು ಅವತಾರಗೊಂಡ ಆರನೇ ಅವತಾರವು ಶ್ರೀ ರಾಮನು. ಈ ದಿನ ಭಕ್ತರು ರಾಮಾಯಣ, ರಾಮಚರಿತಮಾನಸ್ ಅನ್ನು ಪಠಿಸುತ್ತಾರೆ.

ಭಗವಾನ್ ರಾಮನನ್ನು ಆದರ್ಶ ಮಾನವ, ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ. ವಿಶ್ವದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಮುಖ್ಯವಾಗಿ ರಾಮ ಲಲ್ಲಾ ಜನಿಸಿದ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಶ್ರೀ ರಾಮನ ದರ್ಶನ ಪಡೆಯುತ್ತಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!