ನುಂಗೋ ಕಾಲ ಬಂದಾಗ ದೊಡ್ಡ ತಿಮಿಂಗಿಲವನ್ನೇ ನುಂಗಿಬಿಡ್ತೀವಿ: ಎಚ್‌ಡಿಕೆ

ದಿಗಂತ ವರದಿ  ಮೈಸೂರು:

ನುಂಗೋ ಕಾಲ ಬಂದಾಗ ದೊಡ್ಡ ತಿಮಿಂಗಿಲವನ್ನು ನುಂಗಿ ಬಿಡ್ತೀವಿ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ತಿರುಗೇಟು ನೀಡಿದ್ದಾರೆ.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾಗಲೇ ಅವರು ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಹಾಗಾಗಿರುವಾಗವ ವಿದೇಶದಲ್ಲಿರುವ ಅವರು ನಮ್ಮ ಸಂಪರ್ಕಕ್ಕೆ ಸಿಗುವರೇ ಎಂದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಂಶ ಬೇಕಾಗಿಲ್ಲ, ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಬೇಕಾಗಿತ್ತು.

ಎಸ್ ಐಟಿ ತನಿಖೆ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿಲ್ಲ, ವಕೀಲ ದೇವೇರಾಜೇಗೌಡರನ್ನು ಬಂಧಿಸಿ, ಅವರಿಂದ ಪ್ರಕರಣ ದ ಬಗ್ಗೆ ಮಾಹಿತಿ ಪಡೆಯುವ ಬದಲು ಆಡಿಯೋ ಕ್ಲಿಪಿಂಗ್ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ರಾಜ್ಯ ಸರ್ಕಾರದ ಬಿದ್ದು ಹೋಗುವ ಭಯ ಕಾಂಗ್ರೆಸ್ ನಾಯಕರಿಗೆ ಕಾಡುತ್ತಿದೆ. ಹಾಗಾಗಿ ಸರ್ಕಾರದ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಸ್ ಐಟಿಯಿಂದ ತನಿಖೆ ನಡೆಸುತ್ತಿದ್ದಾರೆ.

ತನಿಖೆಯ ಇಂಚಿಚೂ ವರದಿ ಗೃಹ ಸಚಿವರಿಗೆ ಹೋಗುತ್ತಿಲ್ಲ.ಬದಲಾಗಿ ಮಂಡ್ಯದ ಶಾಸಕರಿಗೆ ಹೋಗುತ್ತಿದೆ. ಹಾಗಾಗಿ ಆ ಶಾಸಕರು ವಾರದೊಳಗೆ ದೊಡ್ಡ ತಿಮಿಂಗಿಲ ಬಯಲಿಗೆ ಬರುತ್ತದೆ. ಅವರನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಗೃಹ ಸಚಿವರು ತಮ್ಮ ಪಕ್ಕದಲ್ಲೇ ದೊಡ್ಡ ತಿಮಿಂಗಿಲ ವನ್ನು ಕೂರಿಸಿಕೊಂಡಿದ್ದಾರೆ. ಅವರನ್ನು ಹಿಡಿದು ತನಿಖೆ ಮಾಡಿದರೆ ಆಗ ಸತ್ಯ ಹೊರಬರಲಿದೆ ಎಂದು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here