ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಕ್ಕೆ ಹೊರಗಿನವರಿಂದ ಅಪಮಾನ ಆದಾಗ ನಮ್ಮ ಹೀರೋಗಳು ಮಾತನಾಡ್ಬೇಕು ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ.
ಅದರಲ್ಲಿಯೂ ನಟ ಶಿವರಾಜ್‌ಕುಮಾರ್ ಧ್ವನಿಯೆತ್ತಬೇಕು ಎಂದು ಹೇಳಿದ್ದಾರೆ. ಕ್ಷಮೆ ಕೇಳಲ್ಲ ಎನ್ನುವ ಕಮಲ್ ಹಾಸನ್ ಉದ್ಧಟತನ ವಿಚಾರವಾಗಿ ಮಾತನಾಡಿ, ಅವರೆಲ್ಲ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಕಮಲ್ ಅಂದರೆ ತಮಿಳಿನಲ್ಲಿ ತೇವರ್ ಎಂದರ್ಥ ಎಂದಿದ್ದಾರೆ.
ಹಾಗಾದ್ರೆ ತೇವರ್ ಹಾಸನ್ ಎಂದು ಹೆಸರು ಇಟ್ಟುಕೊಳ್ಳಿ. ಇವೆಲ್ಲಾ ದುರಹಂಕಾರದ ಮಾತುಗಳು. ನಟ ಕಮಲ್ ಹಾಸನ್‌ರನ್ನ ಶಿವರಾಜ್ ಕುಮಾರ್ ಅಪ್ಪಿಕೊಳ್ಳೋದು ಸರಿಯಲ್ಲ. ಕನ್ನಡಕ್ಕೆ ಅಪಮಾನ ಮಾಡಿದಾಗ ಅವರು ಮಾತಾಡಬೇಕು. ಆದರೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಕಿಡಿಕಾರಿದರು.