ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಭೇಟಿಗೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಇದೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಈಗ ಜೈಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದಾರೆ. ಸೋಮವಾರ ಭವಾನಿ ರೇವಣ್ಣ ಮಗನನ್ನು ನೋಡಲು ಬಂದಿದ್ದರು. ಆದರೆ ರೇವಣ್ಣ ಮಾತ್ರ ಮಗನ ಭೇಟಿಗೆ ಬಂದಿರಲಿಲ್ಲ.
ನಾನು ಭೇಟಿ ಮಾಡೋದಿಲ್ಲ, ಮಾಡಿದರೆ ಏನಾದರೂ ಹೇಳಿಕೊಟ್ಟು ಬಂದಿದ್ದೇನೆ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಆದರೆ ಇದೀಗ ಪ್ರಜ್ವಲ್ ಭೇಟಿ ಮಾಡಿದ್ದಾರೆ.