ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2024-2025 ಸಾಲಿನ ಬಜೆಟ್ ಮಂಡಿಸಿದ್ದು, ಇಲ್ಲಿ ನಮ್ಮ ರಾಜ್ಯದ ಹೆಸರನ್ನು ಕೂಡ ಪ್ರಸ್ತಾಪ ಮಾಡಲಾಗಿಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.
ಬಜೆಟ್ ಮಂಡನೆ ಭಾಷಣದಲ್ಲಿ ರಾಜ್ಯಗಳ ಹೆಸರು ಪ್ರಸ್ತಾಪ ಆಗೋದಿಲ್ಲ, ಆದರೆ ಅನುದಾನ ಇಲಾಖಾವಾರು ವಿಂಗಡಣೆಯಾದಾಗ ಕರ್ನಾಟಕಕ್ಕೂ ಪಾಲು ಬರುತ್ತದೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಒಂದು ಎಐಐಎಮ್ ಎಸ್ ಬೇಕೆಂದು ಬಹಳ ದಿನಗಳಿಂದ ಬೇಡಿಕೆ ಇದೆ, ಆದರೆ ಈ ಬಾರಿಯ ಬಜೆಟ್ ನಲ್ಲಿ ಅದ ಪ್ರಸ್ತಾಪವಿಲ್ಲ ಎಂದು ಬೊಮ್ಮಾಯಿಯವರನ್ನು ಕೇಳಿದಾಗ, ಕಳೆದ ವರ್ಷದಿಂದ ಏಮ್ಸ್ ಮಂಜೂರು ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.