ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ಡೆವಿಲ್’ ಸಿನಿಮಾಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಈ ಸಿನಿಮಾದ ಶೂಟಿಂಗ್ ಹಾಗೂ ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿರುವುದಾಗಿ ನಿರ್ದೇಶಕ ಮಿಲನ ಪ್ರಕಾಶ್ ತಿಳಿಸಿದ್ದಾರೆ. ಇದೀಗ ಚಿತ್ರದ ಬಿಡುಗಡೆ ದಿನಾಂಕದ ಕುರಿತಾಗಿ ಸಿನಿಮಾ ವಲಯದಲ್ಲಿ ಬಿಸಿ ಸುದ್ದಿ ಹರಡಿದ್ದು, ಅಕ್ಟೋಬರ್ 23ರಂದು ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಥೈಲ್ಯಾಂಡ್‌ನಲ್ಲಿ ಎರಡು ಹಾಡುಗಳನ್ನು ಶೂಟ್ ಮಾಡಲಾಗಿದ್ದು, ದರ್ಶನ್ ಮತ್ತು ನಾಯಕಿ ರಚನಾ ರೈ ಅಭಿನಯಿಸಿದ್ದಾರೆ. ಈ ಹಾಡುಗಳ ಚಿತ್ರೀಕರಣದ ನಂತರವೇ ನಿರ್ದೇಶಕರು ಶೂಟಿಂಗ್ ಮುಕ್ತಾಯದ ಘೋಷಣೆ ನೀಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಧಾಕರ್ ಎಸ್.ರಾಜ್ ಕ್ಯಾಮರಾ ಕೆಲಸ ಮಾಡಿದ್ದಾರೆ.
ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ದೇಶಕರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲವಾದರೂ, ಅಕ್ಟೋಬರ್ 23ರಂದು ‘ಡೆವಿಲ್’ ಸಿನಿಮಾ ತೆರೆಗೆ ಬರಬಹುದು ಎಂಬ ಸುದ್ದಿ ಚಲನಚಿತ್ರ ವಲಯದಲ್ಲಿ ಹರಿದಾಡುತ್ತಿದೆ. ಈ ದಿನಾಂಕವನ್ನು ನಿರ್ದೇಶಕರು ದೃಢಪಡಿಸದಿದ್ದರೂ, ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಸುಳಿವು ನೀಡಿದ್ದಾರೆ.
‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ಹೊಸ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದ ಟೈಟಲ್ ಹಾಗೂ ಪಾತ್ರದ ಹೆಸರೇ ‘ಡೆವಿಲ್’ ಎಂದು ಹೇಳಲಾಗುತ್ತಿದೆ. ಮಿಲನ ಪ್ರಕಾಶ್ ತಮ್ಮದೇ ಬ್ಯಾನರ್‌ನಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಅದ್ದೂರಿಯಾಗಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ.