ಮಸಾಲಾ ಕಡಲೆಕಾಯಿ ಸ್ನಾಕ್ಸ್ ಆಗಿ ಎಲ್ಲರಿಗೂ ಇಷ್ಟವಾಗುವ ಒಂದು ಸುಲಭ ಹಾಗೂ ರುಚಿಕರವಾದ ತಿಂಡಿ. ಚಹಾ ಅಥವಾ ಕಾಫಿಯ ಜೊತೆ ಅಥವಾ ಸಂಜೆ ಸಮಯದಲ್ಲಿ ಇದು ಅತ್ಯುತ್ತಮ ಆಯ್ಕೆ.
ಬೇಕಾಗುವ ಸಾಮಗ್ರಿಗಳು:
ಕಡಲೆಕಾಯಿ (raw peanuts) – 1 ಕಪ್
ಕಡಲೆ ಹಿಟ್ಟು – 1/2 ಕಪ್
ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1/2 ಟೀ ಸ್ಪೂನ್
ಜೀರಿಗೆ ಪುಡಿ – 1/2 ಟೀ ಸ್ಪೂನ್
ಹಿಂಗು – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಷ್ಟು
ಎಣ್ಣೆ – ಹುರಿಯಲು
ತಯಾರಿ ವಿಧಾನ:
ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಹಿಂಗು, ಉಪ್ಪು ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಹಿಟ್ಟನ್ನು ಕಲಸಿ. ಮಿಶ್ರಣ ಹದವಾಗಿ ಇರಲಿ, ಹೆಚ್ಚು ನೀರಾಗಿ ಮಾಡಬೇಡಿ. ಇದಕ್ಕೆ ಹಸಿ ಕಡಲೆ ಹಾಕಿ ಮಿಕ್ಸ್ ಮಾಡಿ.
ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಮಸಾಲಾ ಲೇಪಿತ ಕಡಲೆಕಾಯಿಗಳನ್ನು ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ
ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿದರೆ ಮಸಾಲಾ ಕಡಲೆ ರೆಡಿ.