ಇಂದು ಪಿಜ್ಜಾ (Pizza) ಎಂಬ ಹೆಸರು ಕೇಳಿದ್ರೆ ಯಾರ ಬಾಯಲ್ಲೂ ನೀರೂರದೇ ಇರೋದಿಲ್ಲ. ಕ್ರೀಮಿ ಚೀಸ್, ಕ್ರಂಚಿ ಬೇಸ್ ಮತ್ತು ಟೊಮೇಟೊ ಸಾಸ್‌ನ ಮಿಶ್ರಣ. ಪಿಜ್ಜಾ ಎಂದರೆ ಎಲ್ಲ ವಯಸ್ಸಿನವರಿಗೂ ಪ್ರಿಯ ಆಹಾರ. ಆದರೆ ಈ ಪಿಜ್ಜಾ ಮೊದಲು ಹುಟ್ಟಿದ್ದು ಎಲ್ಲಿ ಗೊತ್ತಾ? ಇದರ ಜನ್ಮ ಇಟಲಿಯ ನೇಪಲ್ಸ್ (Naples) ನಗರದಲ್ಲಿ ನಡೆದಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
ಪಿಜ್ಜಾ ಹುಟ್ಟಿದ್ದು 18ನೇ ಶತಮಾನದ ಇಟಲಿಯಲ್ಲಿ. ಆ ಕಾಲದಲ್ಲಿ ಬಡ ಜನರು ಹಿಟ್ಟಿನ ರೊಟ್ಟಿಯನ್ನು ಉರಿ ಮೇಲೆ ಬೇಯಿಸಿ, ಅದಕ್ಕೆ ಟೊಮ್ಯಾಟೊ ಮತ್ತು ತರಕಾರಿಗಳನ್ನು ಹಾಕಿ ತಿನ್ನುತ್ತಿದ್ದರು. ಇದೇ ನಂತರ “ಪಿಜ್ಜಾ” ಎಂದು ಪ್ರಸಿದ್ಧಿಯಾಯಿತು.
1889ರಲ್ಲಿ ನೇಪಲ್ಸ್‌ನ ರಾಣಿ ಮಾರ್ಗರೀಟಾ ಅವರಿಗೆ ಟೊಮ್ಯಾಟೊ, ಮೊಜರೆಲ್ಲಾ ಚೀಸ್ ಮತ್ತು ಬೇಸಿಲ್ ಎಲೆಗಳಿಂದ ಮಾಡಿದ ವಿಶೇಷ ಪಿಜ್ಜಾವನ್ನು ತಯಾರಿಸಲಾಯಿತು. ಇದು ಇಟಲಿಯ ಧ್ವಜದ ಬಣ್ಣಗಳನ್ನು ಪ್ರತಿನಿಧಿಸುತ್ತಿತ್ತು. ಅದಕ್ಕೆ “ಮಾರ್ಗರೀಟಾ ಪಿಜ್ಜಾ” ಎಂದು ಇಂದಿಗೂ ಪ್ರಸಿದ್ಧವಾಗಿದೆ.
20ನೇ ಶತಮಾನದಲ್ಲಿ ಇಟಾಲಿಯನ್ ವಲಸಿಗರು ಅಮೆರಿಕಾಕ್ಕೆ ಹೋದ ನಂತರ, ಪಿಜ್ಜಾ ಅಲ್ಲಿ ಬೇಗ ಪ್ರಸಿದ್ಧಿಯಾಯಿತು. ನ್ಯೂಯಾರ್ಕ್ ಮತ್ತು ಚಿಕಾಗೋ ಶೈಲಿಯ ಪಿಜ್ಜಾಗಳು ಹುಟ್ಟಿಕೊಂಡವು. ಇಂದು ಪಿಜ್ಜಾ ವಿಶ್ವದ ಪ್ರತಿಯೊಂದು ಮೂಲೆಗೂ ತಲುಪಿದೆ. ವಿಭಿನ್ನ ಟಾಪಿಂಗ್‌ಗಳು, ಸಾಸ್‌ಗಳು ಮತ್ತು ಕ್ರಸ್ಟ್‌ಗಳೊಂದಿಗೆ.
ಭಾರತೀಯ ಪಿಜ್ಜಾ ಸಂಸ್ಕೃತಿ:
ಭಾರತದಲ್ಲಿ ಪಿಜ್ಜಾಗೆ ಸ್ಥಳೀಯ ಸವಿಯನ್ನು ನೀಡಲಾಗಿದೆ. ಪನೀರ್, ಕಾರ್ನ್, ಮತ್ತು ಮಸಾಲಾ ಟಾಪಿಂಗ್‌ಗಳೊಂದಿಗೆ ದೇಶೀಯ ರುಚಿ ಸೇರಿದೆ.

