ಇಂದಿನ ವಿಮಾನಯಾನ ಸೇವೆಗಳು ಸಾಮಾನ್ಯ ಜನರಿಗೆಲೂ ಸುಲಭವಾಗಿ ಲಭ್ಯವಾಗುತ್ತಿರುವುದು ಖುಷಿಯ ಸಂಗತಿ. ಆದರೆ ವಿಮಾನದ ಒಳಗಿನ ಹಲವು ಅಂಶಗಳು ಇನ್ನೂ ಜನರ ಕುತೂಹಲದ ವಿಷಯಗಳಾಗಿವೆ. ವಿಶೇಷವಾಗಿ “ವಿಮಾನದಲ್ಲಿ ಶೌಚಾಲದ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ?” ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೆ ಇದೆ ಅದ್ಕಕೆ ಉತ್ತರ ಹೇಳ್ತಿವಿ ಕೇಳಿ.
ವಿಮಾನದ ಶೌಚಾಲಯ ವ್ಯವಸ್ಥೆ ನಮ್ಮ ಮನೆಗಳ ಶೌಚಾಲಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇವು ನಿರ್ವಾತ (vacuum) ಆಧಾರಿತ ತಂತ್ರಜ್ಞಾನ ಬಳಸಿ ತ್ಯಾಜ್ಯವನ್ನು ನಿರ್ವಹಿಸುತ್ತವೆ. ಶೌಚಾಲಯದಲ್ಲಿ ಫ್ಲಷ್ ಒತ್ತಿದಾಗ, ಶಕ್ತಿಶಾಲಿ ನಿರ್ವಾತ ವ್ಯವಸ್ಥೆ ಮೂಲಕ ತ್ಯಾಜ್ಯವನ್ನು ತಕ್ಷಣ ಟ್ಯಾಂಕ್‌ಗಳಿಗೆ ಎಳೆಯಲಾಗುತ್ತದೆ. ಈ ಟ್ಯಾಂಕ್‌ಗಳು ಅಲ್ಯೂಮಿನಿಯಂ ಅಥವಾ ಸಂಯೋಜಿತ ವಸ್ತುಗಳಿಂದ ಮಾಡಲ್ಪಟ್ಟಿದ್ದು, ಸೋರಿಕೆಯುಂಟಾಗದಂತೆ ರಚಿಸಲ್ಪಟ್ಟಿರುತ್ತವೆ.
ವಿಮಾನದಲ್ಲಿ ತ್ಯಾಜ್ಯ ನಿರ್ವಹಣೆಗೆ ನೀರಿನ ಬಳಕೆ ಅತಿ ಕಡಿಮೆ ಪ್ರತಿ ಫ್ಲಷ್‌ಗೆ ಕೇವಲ 0.5–1 ಲೀಟರ್ ನೀರೇ ಸಾಕು. ಜೊತೆಗೆ, ತ್ಯಾಜ್ಯದಿಂದ ಉಂಟಾಗುವ ದುರ್ವಾಸನೆಯು ನಿಯಂತ್ರಣಗೊಳ್ಳಲು “ಅನೋಡೈಸ್ಡ್ ಲಿಕ್ವಿಡ್” ಎಂಬ ರಾಸಾಯನಿಕ ಬಳಕೆ ಮಾಡಲಾಗುತ್ತದೆ. ವಿಮಾನ ಇಳಿದ ನಂತರ, ಈ ಟ್ಯಾಂಕ್‌ಗಳು ವಿಶೇಷ ಶೌಚ ಸೇವಾ ವಾಹನಗಳ ಸಹಾಯದಿಂದ ಖಾಲಿ ಮಾಡಲ್ಪಡುತ್ತವೆ ಮತ್ತು ತ್ಯಾಜ್ಯವನ್ನು ತಕ್ಷಣವೇ ಚರಂಡಿ ಸಂಸ್ಕರಣಾ ಘಟಕಗಳಿಗೆ ಕಳಿಸಲಾಗುತ್ತದೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಂತಹ ಸಂಸ್ಥೆಗಳು ತ್ಯಾಜ್ಯವನ್ನು ಗಾಳಿಯಲ್ಲಿ ಬಿಡುಗಡೆ ಮಾಡುವುದನ್ನು ನಿಷೇಧಿಸುವ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಕೆಲ ಅಪರೂಪದ ಸಂದರ್ಭಗಳಲ್ಲಿ ಟ್ಯಾಂಕ್ ಸೋರಿಕೆಯಿಂದ ವಿಮಾನದಿಂದ ತ್ಯಾಜ್ಯ ಹೊರಗೆ ಚೆಲ್ಲಿದ ಘಟನೆಗಳು ಸಹ ನಡೆದಿವೆ. ತ್ಯಾಜ್ಯದೊಂದಿಗೆ ಬೆರೆಸಿದ ಅನೋಡೈಸ್ಡ್ ದ್ರವವು ನೀಲಿ ಬಣ್ಣದ್ದಾಗಿರುವುದರಿಂದ, ಅದು ಬಿದ್ದಲ್ಲೆಲ್ಲಾ ನೀಲಿ ಬಣ್ಣ ಕಾಣಿಸಿಕೊಳ್ಳುತ್ತದೆ. ಆದರೆ ಇಂಥ ಘಟನೆಗಳು ಬಹಳ ವಿರಳ ಮತ್ತು ಇಂದಿನ ತಾಂತ್ರಿಕ ಅಭಿವೃದ್ಧಿಯಿಂದಾಗಿ ಇವು ಸಹ ಇನ್ನಷ್ಟು ಕಡಿಮೆಯಾಗಿವೆ.