ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಅಂದುಕೊಂಡಿದ್ದಕ್ಕಿಂತ ಬಹಳಷ್ಟು ಹೆಸರು ಮಾಡಿದೆ. ಕನ್ನಡದ ಸಿನಿಮಾ ಎಲ್ಲ ಭಾಷೆಗಳಲ್ಲಿಯೂ ಡಬ್ ಆಯ್ತು. ಸಿನಿಮಾ ಇಷ್ಟೆಲ್ಲಾ ಅತ್ಯುತ್ತಮ ಪ್ರದರ್ಶನ ಕಂಡ ನಂತರ ಹೊಸತೊಂದು ಜವಾಬ್ದಾರಿ ರಿಷಭ್ ಹೆಗಲೇರಿದೆ.
ಕಾಂತಾರ ಇಷ್ಟು ಚೆನ್ನಾಗಿದೆ ಇನ್ನು ಮುಂದಿನ ಸಿನಿಮಾ ಹೇಗಿರಬಹುದು, ಪ್ರತಿ ಅಭಿಯಾನಿಯದ್ದು ಇದೇ ಪ್ರಶ್ನೆ, ಪ್ರಶ್ನೆಯಷ್ಟೇ ಅಲ್ಲ ನಿರೀಕ್ಷೆ ಕೂಡ. ಹಾಗಾಗಿ ರಿಷಭ್ ಮುಂದಿನ ಸಿನಿಮಾಗಳ ಬಗ್ಗೆ ಜನ ಭಾರೀ ಕಾತರರಾಗಿದ್ದಾರೆ.
ಕೆಜಿಎಫ್ ಯಶಸ್ಸಿನ ನಂತರ ಯಶ್ ಕೂಡ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಅದೇ ರೀತಿ ಆಗ್ತಾರಾ ರಿಷಭ್ ಕಾದುನೋಡಬೇಕಿದೆ. ಪ್ರಮೋಷನ್ಸ್‌ನಲ್ಲಿ ರಿಷಭ್ ಬ್ಯುಸಿಯಾಗಿದ್ದು, ಬೆಲ್ ಬಾಟಂ -2, ಮಹನೀಯರೆ ಮಹಿಳೆಯರೇ, ಬ್ಯಾಚುಲರ್ ಪಾರ್ಟಿ ಸಿನಿಮಾಗಳಲ್ಲಿ ರಿಷಭ್ ಕಾಣಿಸಲಿದ್ದಾರೆ. ಇನ್ನು ರುದ್ರಪ್ರಯಾಗ್, ಕಿರಿಕ್ ಪಾರ್ಟಿ-2 ಕೂಡ ಇವರ ಕೈಯಲ್ಲಿದೆ.