OTT ಗೆ ಬರ್ತಿದೆ ‘Special Ops Season 2’ ಎಲ್ಲಿ? ಯಾವಾಗ ಸ್ಟ್ರೀಮಿಂಗ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ಒಟಿಟಿಯ ಅತ್ಯಂತ ಜನಪ್ರಿಯ ಗೂಢಚಾರ ಸೀರೀಸ್‌ ‘ಸ್ಪೆಷಲ್ ಓಪ್ಸ್’ ತನ್ನ ಹೊಸ ಸೀಸನ್‌ ಸ್ಪೆಷಲ್ ಓಪ್ಸ್ 2ನೊಂದಿಗೆ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಕೆಕೆ ಮೆನನ್ ತಮ್ಮ ಸವಾಲಿನ ಪಾತ್ರವಾದ ‘ಹಿಮ್ಮತ್ ಸಿಂಗ್’ ಆಗಿ ಎರಡನೇ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದು, ಈ ಬಾರಿಯ ಕಥೆ ಗಡಿ ಪಾರು ಯುದ್ಧವಲ್ಲ – ಡಿಜಿಟಲ್ ಯುದ್ಧ.

‘ಸ್ಪೆಷಲ್ ಓಪ್ಸ್ 2’ ಅನ್ನು ಜುಲೈ 11, 2025ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ಜಿಯೋಹಾಟ್‌ಸ್ಟಾರ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಟ್ರೇಲರ್‌ ಮೂಲಕ ಘೋಷಿಸಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಈಗಾಗಲೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

‘ಸ್ಪೆಷಲ್ ಓಪ್ಸ್ 2’ ಸೈಬರ್ ದಾಳಿ, ಕೃತಕ ಬುದ್ಧಿಮತ್ತೆ, ಡೇಟಾ ಕಳ್ಳತನ, ಡಿಜಿಟಲ್ ವಂಚನೆ ಮುಂತಾದ ಪ್ರಮುಖ ಆಧುನಿಕ ಭದ್ರತಾ ಚಿಂತೆಗಳನ್ನೇ ಆಧಾರ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಈ ಸೀಸನ್ ಪ್ರಸ್ತುತ ಯುಗದ ಭೀತಿಗಳನ್ನು ಆಳವಾಗಿ ಎಳೆದು ತೋರಿಸಲು ಮುಂದಾಗಿದೆ.

ಈ ಸೀಸನ್‌ಕಥೆ ಭಾರತವನ್ನು ಗುರಿಯಾಗಿಸಿಕೊಂಡಿರುವ ಸೈಬರ್ ಅಪಾಯದ ಇಂದಿನ ರೂಪದ ಮೇಲೆ ಆಧಾರಿತವಾಗಿದೆ. ಯುಪಿಐ, ಡೇಟಾ ಹಕ್ಕು, ಆರ್ಥಿಕ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಯ ನಡುವೆಯೇ ಹಿಮ್ಮತ್ ಸಿಂಗ್ ಮತ್ತೆ ತನ್ನ ಹಳೆಯ ತಂಡವನ್ನು ಒಟ್ಟುಗೂಡಿಸಿಕೊಂಡು ದೇಹಧಾರಿ ಅಲ್ಲದ ಶತ್ರುವನ್ನು ಎದುರಿಸುವುದು ಹಿಮ್ಮತ್ ಹಾಗೂ ತಂಡಕ್ಕೆ ಸವಾಲಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!