March 22, 2026
Sunday, March 22, 2026
spot_img

ಎಲ್ಲಿದ್ದಾರೆ ನಿಮ್ಮ ಸುಪ್ರೀಂ ಲೀಡರ್?: ಇರಾನ್ ಹೊತ್ತಿ ಉರಿತಿದ್ರೂ ಖಮೇನಿ ಪತ್ತೆ ಇಲ್ಲ ಅಂತಿದೆ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ಸ್ಥಿತಿ ಬಗ್ಗೆ ಅಮೆರಿಕ ಪ್ರಶ್ನೆ ಎತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆಯೇ? ಬದುಕಿದ್ದಾರೋ, ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದೆ.

ಅಮೆರಿಕ ಗುಪ್ತಚರ ಮೂಲಗಳ ಪ್ರಕಾರ, ಇತ್ತೀಚಿನ ಬೆಳವಣಿಗೆಗಳ ನಡುವೆಯೇ ಇರಾನ್‌ನಲ್ಲಿ ಉನ್ನತ ಮಟ್ಟದ ಐವರು ನಾಯಕರು ಹತ್ಯೆಯಾಗಿದ್ದಾರೆ. ಈ ಸನ್ನಿವೇಶದಲ್ಲೂ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ದಿನಾಂಕ ಸ್ಪಷ್ಟವಾಗದ ಕೆಲವು ವಿಡಿಯೋ ಸಂದೇಶಗಳು ಮಾತ್ರ ಹೊರಬಂದಿರುವುದಾಗಿ ತಿಳಿದುಬಂದಿದೆ.

ಫೆಬ್ರವರಿ ಅಂತ್ಯದಲ್ಲಿ ಆಯಾತುಲ್ಲಾ ಅಲಿ ಖಮೇನಿ ಸಾವಿನ ನಂತರ, ಮಾರ್ಚ್ ಆರಂಭದಲ್ಲಿ ಮೊಜ್ತಾಬಾ ಖಮೇನಿ ಅಧಿಕಾರ ವಹಿಸಿಕೊಂಡಿದ್ದರು ಎನ್ನಲಾಗಿದೆ. ಮಾರ್ಚ್ 12ರಂದು ಅವರು ಸಾರ್ವಜನಿಕ ಹೇಳಿಕೆ ನೀಡಿದ್ದು, ಮಾರ್ಚ್ 20ರಂದು ಮತ್ತೊಂದು ಸಂದೇಶ ಹಂಚಿಕೊಂಡಿದ್ದರು. ಇದಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ:

ಇದರ ಬಗ್ಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಿ, ಒಬ್ಬ ನಾಯಕನ ಉಪಸ್ಥಿತಿ ಅಥವಾ ಅನುಪಸ್ಥಿತಿ ದೇಶದ ಆಡಳಿತ ವ್ಯವಸ್ಥೆಯನ್ನು ಪರಿಣಾಮಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಆದರೆ, ಮೊಜ್ತಾಬಾ ಖಮೇನಿ ಗಾಯಗೊಂಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಅವರ ಗೈರು ಹಾಜರಿ ರಾಜಕೀಯ ವಲಯದಲ್ಲಿ ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಇದೀಗ ಅವರ ಸ್ಥಿತಿ ನಿಗೂಢವಾಗಿಯೇ ಉಳಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !