ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಬೆಳಗ್ಗೆ ಎಂಟು ಗಂಟೆಗೆ ಆಫೀಸ್‌ಗೆ ಹೊರಡಲು ಮನೆ ಬಿಟ್ಟವರಿಗೂ ವಾಕಿಂಗ್ ಹೋಗುವ ಅನುಭವವಾಗುತ್ತಿದೆ.
ಶಾಲಾ ಮಕ್ಕಳಿಗೆ ಸ್ವೆಟರ್ ಟೋಪಿ ಹಾಕಿಸಿ ಪೋಷಕರು ಕಳುಹಿಸುತ್ತಿದ್ದಾರೆ. ರಸ್ತೆಯಲ್ಲಿ ಎಷ್ಟು ದೂರ ಕಣ್ಣು ಹಾಯಿಸಿದರೂ ಮಂಜು ಮಾತ್ರ ಕಾಣಿಸುತ್ತಿದೆ.
ಡಿಸೆಂಬರ್‌ನಲ್ಲಿ ದಾಖಲೆಯ ಚಳಿ ವರದಿಯಾಗಿದ್ದು, ಇನ್ನೂ 15 ದಿನ ಇದೇ ವಾತಾವರಣ ಇರಲಿದೆ. ಇದರಿಂದಾಗಿ ಸಾಕಷ್ಟು ಮಂದಿಯಲ್ಲಿ ಶೀತ, ಕೆಮ್ಮು, ನೆಗಡಿ, ತಲೆನೋವು ಸಮಸ್ಯೆಗಳು ಬಾಧಿಸುತ್ತವೆ. ಈ ಬಗ್ಗೆ ಎಚ್ಚರ ಇರಲಿ ಎಂದು ತಜ್ಞರು ಹೇಳಿದ್ದಾರೆ.
ಆರೋಗ್ಯದ ಕಾಳಜಿ ಹೀಗೆ ಮಾಡಿ..
- ಚಳಿ ಎಂದು ವ್ಯಾಯಾಮ ಮಾಡೋದನ್ನು ನಿಲ್ಲಿಸಬೇಡಿ.
- ಬೆಚ್ಚಗಿನ ಆರೋಗ್ಯಕರ ಆಹಾರ ಸೇವನೆ ಮಾಡಿ
- ಚಳಿಗೆ ನೀರು ಕುಡಿಯುವ ಆಸೆ ಆಗೋದಿಲ್ಲ, ಆದರೆ ಹೆಚ್ಚು ನೀರು ಕುಡಿದು ಹೈಡ್ರೇಟ್ ಆಗಿರಿ
- ವಿಟಮಿನ್ ಸಿ ಇರುವ ಹಣ್ಣುಗಳ ಸೇವನೆ ಮಾಡಿ
- ಎಂಟು ಗಂಟೆಗಳ ನಿದ್ದೆ, ಬೆಳಗಿನ ಬಿಸಿಲಿಗೆ ಮೈಯೊಡ್ಡಿ
- ಬೆಚ್ಚಗಿನ ಬಟ್ಟೆ ನಿಮ್ಮದಾಗಿರಲಿ, ಹೈಜಿನ್‌ಗೆ ಮಹತ್ವ ನೀಡಿ
- ರಸ್ತೆಬದಿ ಆಹಾರಗಳಿಗೆ ನೋ ಹೇಳಿ, ಮನೆಯಲ್ಲಿಯೇ ಆರೋಗ್ಯಕರ ಆಹಾರ ಫ್ರೆಶ್ ಆಗಿ ತಯಾರಿಸಿ ಸೇವಿಸಿ