ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಲೋಕಸೇವಾ ಆಯೋಗದ (UPSC) ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ್ದಾರೆ. ಅವರ ಅಧಿಕಾರಾವಧಿಯು 2029 ರಲ್ಲಿ ಕೊನೆಗೊಳ್ಳಬೇಕಿತ್ತು, ಮತ್ತು ಐದು ವರ್ಷಗಳು ಬಾಕಿ ಇರುವಾಗ ಅವರ ರಾಜೀನಾಮೆಯು ಹೆಚ್ಚಿನ ಊಹಾಪೋಹಗಳನ್ನು ಹುಟ್ಟುಹಾಕಿದೆ.
ವೈಯಕ್ತಿಕ ಕಾರಣಗಳಿಂದ ಐದು ವರ್ಷಗಳ ಹಿಂದೆ ಹುದ್ದೆ ತೊರೆದಿದ್ದ ಮನೋಜ್ ಸೋನಿ, ಪೂಜಾ ಖೇಡ್ಕರ್ ವಿವಾದಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ ಮನೋಜ್ ಸೋನಿ ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋನಿ ಅವರು 2017 ರಲ್ಲಿ ಆಯೋಗವನ್ನು ಸೇರಿದ್ದಾರೆ. ಅವರು ಮೇ 16, 2023 ರಂದು UPSC ಅಧ್ಯಕ್ಷರಾಗಿ ನೇಮಕಗೊಂಡರು.