ಈಗೆಲ್ಲಾ ಚಿಕ್ಕವಯಸ್ಸಿನಲ್ಲೇ ಬಿಳಿ ಕೂದಲು ಬರೋದು ಕಾಮನ್ ಅನ್ನೋವಷ್ಟು ಕಾಮನ್ ಆಗಿಬಿಟ್ಟಿದೆ. ೨೫ ನೇ ವರ್ಷಕ್ಕೆ ಬಿಳಿಕೂದಲು ಒಂದೊಂದಾಗಿ ಕಾಣಿಸಿ ಹೆಚ್ಚಾಗುತ್ತಲೇ ಹೋಗುತ್ತದೆ. ನೈಸರ್ಗಿಕವಾಗಿ ಬಿಳಿ ಕೂದಲು ಕಡಿಮೆ ಮಾಡೋದಕ್ಕೆ ಹೀಗೆ ಮಾಡಿ…
- ಆಂಟಿ ಆಕ್ಸಿಡೆಂಟ್ಸ್‌ಗಳಿಗೆ ಹಸಿರು ತರಕಾರಿ, ಎಲೆ, ದಾರ್ಕ್ ಚಾಕೋಲೆಟ್, ಡೈರಿ ಪದಾರ್ಥಗಳು, ಮೊಟ್ಟೆ, ಸೋಯಾಬೀನ್, ಮಶ್ರೂಮ್ ಸೇವನೆ ಮಾಡಿ.
- ಯಾವ ವಿಟಮಿನ್ ಕೊರತೆಯಿಂದ ಕೂದಲು ಬಿಳಿಯಾಗುತ್ತಿದೆ ಎಂದು ಪರೀಕ್ಷೆ ಮಾಡಿ ತಿಳಿದುಕೊಳ್ಳಿ
- ಧೂಮಪಾನ ಮಾಡುವ ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ
- ಕರಿಬೇವು, ಭ್ರಿಂಗರಾಜ್, ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚಿ.
- ಕೂದಲಿಗೆ ಬ್ಲಾಕ್ ಟೀ ಹಾಕಿ ಮಸಾಜ್ ಮಾಡಿ
- ಕಾಪರ್ ಅಂಶವುಳ್ಳ ಆಹಾರ ಸೇವಿಸಿ, ಕಾಳುಗಳು, ಬಾದಾಮಿ, ಡಾರ್ಕ್ ಚಾಕೋಲೆಟ್‌ನಲ್ಲಿ ಕಾಪರ್ ಅಂಶ ಹೆಚ್ಚಿದೆ.