ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಲಾಭ ಪಡೀತಾ ಇದಾರೆ, ಇದನ್ನು ಅವರು ಮೊದಲು ಬಿಡಬೇಕು ಎಂದು ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದ್ದಾರೆ.
ಶ್ರೀಮಂತರು ಏನಾದ್ರೂ ಗ್ಯಾರಂಟಿ ಲಾಭ ಪಡೀತಾ ಇದ್ರೆ ಅದು ಅವರ ತಪ್ಪು. ಈ ಬಗ್ಗೆ ಡಿಸಿಎಂ ಕೂಡ ಹೇಳಿದ್ದಾರೆ. ಬೇಕು ಅಂತಲೇ ಲಾಭ ಪಡೆಯೋದನ್ನು ನಿಲ್ಲಿಸಿ. ನಿಜವಾದ ಬಡವರಿಗೆ ಅನ್ಯಾಯ ಆಗ್ತಿದೆ ಎಂದಿದ್ದಾರೆ.
ಶ್ರೀಮಂತರು ಗ್ಯಾರಂಟಿ ಯೊಜನೆ ತೆಗೆದುಕೊಳುತ್ತಿದ್ದರೆ ಬಿಡಬೇಕು. ಅರ್ಹ ಬಿಪಿಎಲ್ ಕುಟುಂಬದವರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳಲಿ. ಶ್ರೀಮಂತರು ಗ್ಯಾರಂಟಿ ಯೋಜನೆ ತಗೆದುಕೊಳ್ಳೋದು ಆಗಬಾರದು ಅನ್ನೋದು ನನ್ನ ಅಭಿಪ್ರಾಯವೂ ಹೌದು ಎಂದು ತಿಳಿಸಿದರು.ಇನ್ನೂ ಗ್ಯಾರಂಟಿ ಯೋಜನೆ ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎನ್ನುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.



