ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿದೇಶಾಂಗ ನೀತಿಯನ್ನು ಯಾರು ತೀರ್ಮಾನ ಮಾಡ್ತಾರೆ. ಪ್ರಧಾನಿ ಮೋದಿಯವರಾ ಅಥವಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಪ್ರಶ್ನಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಅಪಸ್ವರ ಹಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಬಗ್ಗೆ ಮಾತನಾಡಿದ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರು ಹೇಳ್ತಾರೆ. ಬಹಳ ಸ್ಪಷ್ಟವಾಗಿ ಮೊದಲ ದಿನದಿಂದಲೂ ಯಾವುದೇ ನಿರ್ಧಾರ ಇದ್ದರೂ ಸರ್ಕಾರದ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಕದನ ವಿರಾಮ ನಿಮ್ಮಿಂದ ಆಗಿದ್ರೆ ಬಹಳ ಸಂತೋಷ. ನನ್ನಿಂದ ಕದನ ವಿರಾಮ ಆಗಿದೆ ಎಂದು ಏಳನೇ ಬಾರಿ ಟ್ರಂಪ್ ಹೇಳಿದ್ದಾರೆ. ನಾವು ಕೇಳಿದ್ದು, ನಮ್ಮ ವಿದೇಶಾಂಗ ನೀತಿಯ ತೀರ್ಮಾನ ತೆಗೆದುಕೊಳ್ತಿರೋದು ಯಾರು? ನರೇಂದ್ರ ಮೋದಿಯವರಾ ಅಥವಾ ಡೊನಾಲ್ಡ್ ಟ್ರಂಪ್ ಎಂದು ಕೇಳುವ ಮೂಲಕ ಕಿಡಿಕಾರಿದ್ದಾರೆ.