ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತಕ್ಕೆ ಭಾಷೆ ಇಲ್ಲ, ಕೃಷ್ಣ ತನ್ನ ಕೊಳಲಿನ ನಾದದಿಂದ ಹಸುಗಳನ್ನು ತನ್ನ ಬಳಿ ಕರೆಸಿಕೊಳ್ಳುತ್ತಿರುವ ಬಗ್ಗೆ ಕೇಳಿದ್ದೇವೆ. ಅದೇ ರೀತಿ ಇಲ್ಲಿಯೂ ಒಬ್ಬ ಸಂಗೀತಕಾರನ ಸಂಗೀತಕ್ಕೆ ಹಸುಗಳು ಮಾರುಹೋಗಿ ಆತನ ಬಳಿ ಬಂದು ನಿಲ್ಲುತ್ತವೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಂಗೀತದ ಶಕ್ತಿ ಎಷ್ಟಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ತನ್ಸು ಯೆಗೆನ್ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದೆ. ಸಂಗೀತಕ್ಕಿರುವ ಶಕ್ತಿಯೇ ಹಾಗೆ, ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಸ್ಯಾಕ್ಸೋಫೋನ್ ಗಾನಕ್ಕೆ ಎಲ್ಲೆಲ್ಲೋ ಇದ್ದ ಹಸುಗಳು ಒಂದಾಗಿ ಬರುತ್ತವೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಂಗೀತದ ಶಕ್ತಿಗೆ ನೆಟ್ಟಿಗರು ತಲೆಯಾಡಿಸಿದ್ದಾರೆ.
https://twitter.com/TansuYegen/status/1581254770584526849?s=20&t=6WGxHQEunNK8e_JOoPxQlg