March 6, 2026
Friday, March 6, 2026
spot_img

ಯಾರಿಗೆ 3 ಗಂಡಂದಿರು ಇದ್ದಾರೆ? ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ vs ಅಶ್ವಿನಿ ಫೈಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಗಳಾದ ಚೈತ್ರಾ ಕುಂದಾಪುರ ಹಾಗೂ ಅಶ್ವಿನಿ ಗೌಡ ಮಧ್ಯೆ ಇನ್‌ಸ್ಟಾಗ್ರಾಮ್‌ ವಾರ್‌ ಶುರು ಆಗಿದೆ. ಈಗ ಚೈತ್ರಾ ಕುಂದಾಪುರ ಅವರು ಮೂರು ಮದುವೆಯಾದ ಬಿಗ್‌ ಬಾಸ್‌ ಸ್ಪರ್ಧಿ ಎಂದು ಇನ್‌ಸ್ಟಾಗ್ರಾಮ್‌ ಸ್ಟೋರಿ ಹಂಚಿಕೊಂಡಿದ್ದಾರೆ.

ಇದೀಗ ಅಶ್ವಿನಿ ಪೋಸ್ಟ್ ಒಂದನ್ನ​ ಶೇರ್​​ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ.

ಅಶ್ವಿನಿ ಗೌಡ ಅವರ ಅಭಿಮಾನಿಗಳು, ‘ಅದು ಪಿ ಆರ್‌ ಅಲ್ಲ, ಗೌರವ, ಪಿ ಆರ್‌ ತಂತ್ರದಿಂದ ಗೌರವ ಬರೋದಿಲ್ಲ’ಎಂದು ಪೋಸ್ಟ್‌ ಹಂಚಿಕೊಳ್ಳುತ್ತಿದ್ದರು. ಆಮೇಲೆ ಅಶ್ವಿನಿ ಗೌಡ ಕೂಡ ಇದನ್ನೆಲ್ಲ ಶೇರ್‌ ಮಾಡಿದ್ದರು.

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಆಟ ಆಡುವಾಗ ಅವರ ಮೈಮೇಲೆ ಗಾಯಗಳು ಆಗಿತ್ತು. ಅಶ್ವಿನಿ ಗೌಡ ಕೈಮೇಲೆ ಪರಚಿದ ಗಾಯಗಳ ಗುರುತು ಇತ್ತು. ಈ ಫೋಟೋಗಳು ಈಗ ವೈರಲ್‌ ಆಗುತ್ತಿದ್ದವು. ಈ ಬಗ್ಗೆ ಚೈತ್ರಾ ಕುಂದಾಪುರ ಅವು ಪ್ರತಿಕ್ರಿಯೆ ಕೊಟ್ಟಿದ್ದು, ‘ಇದು ಪಿಆರ್‌ ತಂತ್ರ, ನಾನು ಪಿಆರ್‌ ಮಾಡಿಲ್ಲ’ ಎಂದು ಹೇಳಿದ್ದರು.

ಇದೀಗ ‘ವೈಯಕ್ತಿಕ ದಾಳಿಗೆ ಇಳಿಯೋದೆ ಆದರೆ ನಾನು ಇಳಿಯಬಲ್ಲೆ. ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ನನಗೂ ಗೊತ್ತು, ಯಾರು ಮೇಲೆ ಎಷ್ಟು ಚೆಕ್‌ಬೌನ್ಸ್‌ ಕೇಸ್‌ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಯಾಕೆ ತನ್ನ ಪ್ರೀತಿಯ ಬಗ್ಗೆ ಎರಡು ನಿಮಿಷ ಮಾತನಾಡುವ ಧೈರ್ಯ ಕೂಡ ಬಗ್‌ ಬಾಸ್‌ ಮನೆಯ ಒಳಗಡೆ ತೋರಿಸಲಿಲ್ಲ. ಎಲ್ಲವನ್ನು ಮಾತನಾಡಬಲ್ಲೆ, ಆದರೆ ನಾನು ಇವರಷ್ಟು ಚೀಪ್‌ಅಲ್ಲ, ನನಗೆ ಇನ್ನೊಬ್ಬತ ಮೇಲೆ ವೈಯಕ್ತಿಕ ದಾಳಿ ಮಾಡಿ ಪ್ರಚಾರ ಪಡೆಯುವ ಹುಚ್ಚು ಇಲ್ಲ. ಅಂದಹಾಗೆ ಚೆಕ್‌ ಬೌನ್ಸ್‌ಕೇಸ್‌ ಕೂಡ ವಂಚನೆ ಕೇಸ್‌ ಅಡಿಯಲ್ಲೇ ಬರುತ್ತದೆ. ಮೂರು ಗಂಡಂದಿರು.. ಕ್ಷಮಿಸಿ ಈಗ ಹೆಗಲು ಮುಟ್ಟಿ ನೋಡಿಕೊಳ್ಳಬೇಕು’ ಎಂದು ಚೈತ್ರಾ ಕುಂದಾಪುರ ಅವರು ಪೋಸ್ಟ್‌ ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !